KPTCL ಪರೀಕ್ಷಾ ಅಕ್ರಮ : ಬಂಧಿತರ ಸಂಖ್ಯೆ 20ಕ್ಕೆ ಏರಿಕೆ..!

1 Min Read

 

 

ಬೆಳಗಾವಿ: ಕೆಪಿಟಿಸಿಎಲ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಈಗಾಗಲೇ 17 ಜನೆನ್ನು ಬಂಧಿಸಲಾಗಿತ್ತು. ಇದೋಗ ಮತ್ತೆ ಮೂವೆ ಬಂಧನವಾವಿದ್ದು, ಬಂಧಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಆಗಸ್ಟ್ 7 ರಂದು ಗೋಕಾಕ್ ನಲ್ಲಿ ಕೆಪಿಟಿಸಿಎಲ್ ಪರೀಕಗಷೆ ನಡೆದಿತ್ತು. ಈ ವೇಳೆ ಬಂಧಿತ ಆರೋಪಿಗಳು ಪರೀಕ್ಷಾರ್ಥಿಗಳಿಗೆ ಸ್ಮಾರ್ಟ್ ವಾಚ್, ಇಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡಿದ್ದರು. ಗೋಕಾಕ್ ನಗರದಲ್ಲಿ ಈ ಪರೀಕ್ಷೆ ನಡೆದಿತ್ತು.

ಅರಭಾವಿ ಪಟ್ಟಣದ ಅಕ್ಷಯ್ ದುಂದಪ್ಪ ಭಂಡಾರಿ (33), ಬೀರಣಗಡ್ಡಿ ಗ್ರಾಮದ ಬಸವರಾಜ್ ರುದ್ರಪ್ಪ ದುಂದನಟಿ (34), ರಾಜಾಪುರ ಗ್ರಾಮದ ಶ್ರೀಧರ ಲಕ್ಕಪ್ಪ ಬಂಧಿತ ಆರೋಪಿಗಳು. ಈ ಎಲೆಕ್ಟ್ರಾನಿಕ್ ಡಿವೈಸ್ ಬೆಂಗಳೂರಿನಿಂದ ಹೋಗಿದೆ. ಪ್ರಮುಖ ಆರೋಪಿಯಾದ ಸಂಜು ಭಂಡಾರಿ ತಂದು ಕೊಟ್ಟಿದ್ದಾರೆ. ಈಗಾಗಲೇ ಬಂಧಿತರಿಂದ ಮೊಬೈಲ್ ಮತ್ತು 50 ಖಾಲಿ ಇಲೆಕ್ಟ್ರಾನಿಕ್ ಡಿವೈಸ್, 18 ಇಲೆಕ್ಟ್ರಾನಿಕ್ ಡಿವೈಸ್ ಜಪ್ತಿ ಮಾಡಿಕೊಳ್ಳಲಾಗಿದೆ.

ಮತ್ತೊಬ್ಬ ಆರೋಪಿ ಬಸವರಾಜ ಪರೀಕ್ಷಾ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಹೇಳಿದ ಆರೋಪವಿದ್ದು ಈತನಿಂದ ಒಂದು ಮೊಬೈಲ್, ಒಂದು ಮೋಟಾರ್ ಸೈಕಲ್ ಜಪ್ತಿ ಮಾಡಿಕೊಳ್ಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *