Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೆಪಿಎಸ್ಸಿ ಸಂದರ್ಶನ ರದ್ದು..!

---Advertisement---

ಬೆಂಗಳೂರು: ಕೆಪಿಎಸ್ಸಿ ಪರೀಕ್ಷಾ ಅಕ್ರಮಗಳು ಆಗಾಗ ಕೇಳಿ ಬರ್ತಾನೆ ಇರುತ್ತೆ. ಆದರೆ ಒಂದೇ ಕೊಠಡಿಯಲ್ಲಿ ಕುಳಿತ 11 ಜನ ಪಾಸಾಗಿರೋದು ಇದೇ ಮೊದಲ ಬಾರಿಗೆ ಅನ್ಸುತ್ತೆ. 384 ಪ್ರೊಸೆಸ್ ನಲ್ಲಿ ನಡೆದಿದೆ ಎನ್ನಲಾದ ಅಕ್ರಮದ ವಿರುದ್ಧ ಪ್ರಾಮಾಣಿಕ ವಿದ್ಯಾರ್ಥಿಗಳ ಹೋರಾಟಕ್ಕೆ ಇದೀಗ ಮೊದಲ ಜಯ ಸಿಕ್ಕಿದೆ. ಪರೀಕ್ಷಾ ಅಕ್ರಮದ ಕಪ್ಪು ಚುಕ್ಕೆ ಅಂಟಿರುವ ಈ ನೇಮಕಾತಿಗೆ ಸಂಬಂಧಪಟ್ಟ ಹಾಗೆ ಕಪಿಎಸ್ಸಿ ಈಹ ಸಂದರ್ಶನವನ್ನು ರದ್ದು ಮಾಡಿದೆ.

ಡಾಕ್ಯುಮೆಂಟ್ ವೆರಿಫಿಕೇಷನ್ ಡೇಟ್ಸ್ ಅನ್ನು ಅಧಿಕೃತವಾಗಿ ವಾಪಾಸ್ ಪಡೆದುಕೊಂಡಿದೆ. 2023-24ನೇ ಸಾಲಿನ ಪರೀಕ್ಷೆಯ ಫಲಿತಾಂಶ ಬಂದಾಗ ಎಲ್ಲರೂ ಶಾಕ್ ಆಗಿದ್ದರು. ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದ 11 ಜನ ಪಾಸ್ ಆಗಿದ್ದರು. ಇದು ಕಾಕತಾಳೀಯವಾಗಿರಲು ಸಾಧ್ಯವಿಲ್ಲ. ಇದೊಂದು ಪರೀಕ್ಷಾ ಅಕ್ರಮ. ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಇಲ್ಲಿ ಅನ್ಯಾಯವಾಗಿದೆ ಎಂದು ಜೋರು ಧ್ವನಿ ಎತ್ತಿದರು. ಈ ಧ್ವನಿ ದೊಡ್ಡಮಟ್ಟದಲ್ಲಿ ಕೇಳಿ ಬಂದರು ಸಹ ಕೆಪಿಎಸ್ಸಿ ಇದೇ ಮಾರ್ಚ್ 23ರಿಂದ ಮೇ 4ರ ತನಕ ಪರೀಕ್ಷೆ ನಡೆಸುವುದಕ್ಕೆ ರೆಡಿಯಾಗಿತ್ತು.

ಈ ಭಾರೀ ಪ್ರತಿಭಟನೆಯ ಎಫೆಕ್ಟ್‌ನಿಂದಾಗಿ ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ಅವರು ಈಗ ಅಫಿಷಿಯಲ್ ಸ್ಟೇಟ್‌ಮೆಂಟ್ ನೀಡಿದ್ದಾರೆ. ಮಾರ್ಚ್ 23 ರಿಂದ ನಿಗದಿಯಾಗಿದ್ದ ಸಂದರ್ಶನ ಮತ್ತು ದಾಖಲೆ ಪರಿಶೀಲನೆಯನ್ನ ಸದ್ಯಕ್ಕೆ ತಡೆಹಿಡಿಯಲಾಗಿದೆ ಅಂತ ತಿಳಿಸಿದ್ದಾರೆ. ಮುಂದಿನ ದಿನಾಂಕದ ಬಗ್ಗೆ ಆಯೋಗವು ನಂತರ ಮಾಹಿತಿ ನೀಡಲಿದೆ. ಇದು ಹಗಲಿರುಳು ಕಷ್ಟಪಟ್ಟು ಓದಿ ಎಕ್ಸಾಮ್ ಬರೆದಿರೋ ಪ್ರಾಮಾಣಿಕ ಸ್ಟೂಡೆಂಟ್ಸ್‌ಗೆ ಸಿಕ್ಕಿರೋ ಒಂದು ದೊಡ್ಡ ರಿಲೀಫ್ ಮತ್ತು ಭರವಸೆ ಅಂತಾನೇ ಹೇಳಬಹುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now