ಬೆಂಗಳೂರು: ಕೆಪಿಎಸ್ಸಿ ಪರೀಕ್ಷಾ ಅಕ್ರಮಗಳು ಆಗಾಗ ಕೇಳಿ ಬರ್ತಾನೆ ಇರುತ್ತೆ. ಆದರೆ ಒಂದೇ ಕೊಠಡಿಯಲ್ಲಿ ಕುಳಿತ 11 ಜನ ಪಾಸಾಗಿರೋದು ಇದೇ ಮೊದಲ ಬಾರಿಗೆ ಅನ್ಸುತ್ತೆ. 384 ಪ್ರೊಸೆಸ್ ನಲ್ಲಿ ನಡೆದಿದೆ ಎನ್ನಲಾದ ಅಕ್ರಮದ ವಿರುದ್ಧ ಪ್ರಾಮಾಣಿಕ ವಿದ್ಯಾರ್ಥಿಗಳ ಹೋರಾಟಕ್ಕೆ ಇದೀಗ ಮೊದಲ ಜಯ ಸಿಕ್ಕಿದೆ. ಪರೀಕ್ಷಾ ಅಕ್ರಮದ ಕಪ್ಪು ಚುಕ್ಕೆ ಅಂಟಿರುವ ಈ ನೇಮಕಾತಿಗೆ ಸಂಬಂಧಪಟ್ಟ ಹಾಗೆ ಕಪಿಎಸ್ಸಿ ಈಹ ಸಂದರ್ಶನವನ್ನು ರದ್ದು ಮಾಡಿದೆ.
ಡಾಕ್ಯುಮೆಂಟ್ ವೆರಿಫಿಕೇಷನ್ ಡೇಟ್ಸ್ ಅನ್ನು ಅಧಿಕೃತವಾಗಿ ವಾಪಾಸ್ ಪಡೆದುಕೊಂಡಿದೆ. 2023-24ನೇ ಸಾಲಿನ ಪರೀಕ್ಷೆಯ ಫಲಿತಾಂಶ ಬಂದಾಗ ಎಲ್ಲರೂ ಶಾಕ್ ಆಗಿದ್ದರು. ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದ 11 ಜನ ಪಾಸ್ ಆಗಿದ್ದರು. ಇದು ಕಾಕತಾಳೀಯವಾಗಿರಲು ಸಾಧ್ಯವಿಲ್ಲ. ಇದೊಂದು ಪರೀಕ್ಷಾ ಅಕ್ರಮ. ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಇಲ್ಲಿ ಅನ್ಯಾಯವಾಗಿದೆ ಎಂದು ಜೋರು ಧ್ವನಿ ಎತ್ತಿದರು. ಈ ಧ್ವನಿ ದೊಡ್ಡಮಟ್ಟದಲ್ಲಿ ಕೇಳಿ ಬಂದರು ಸಹ ಕೆಪಿಎಸ್ಸಿ ಇದೇ ಮಾರ್ಚ್ 23ರಿಂದ ಮೇ 4ರ ತನಕ ಪರೀಕ್ಷೆ ನಡೆಸುವುದಕ್ಕೆ ರೆಡಿಯಾಗಿತ್ತು.
ಈ ಭಾರೀ ಪ್ರತಿಭಟನೆಯ ಎಫೆಕ್ಟ್‌ನಿಂದಾಗಿ ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ಅವರು ಈಗ ಅಫಿಷಿಯಲ್ ಸ್ಟೇಟ್‌ಮೆಂಟ್ ನೀಡಿದ್ದಾರೆ. ಮಾರ್ಚ್ 23 ರಿಂದ ನಿಗದಿಯಾಗಿದ್ದ ಸಂದರ್ಶನ ಮತ್ತು ದಾಖಲೆ ಪರಿಶೀಲನೆಯನ್ನ ಸದ್ಯಕ್ಕೆ ತಡೆಹಿಡಿಯಲಾಗಿದೆ ಅಂತ ತಿಳಿಸಿದ್ದಾರೆ. ಮುಂದಿನ ದಿನಾಂಕದ ಬಗ್ಗೆ ಆಯೋಗವು ನಂತರ ಮಾಹಿತಿ ನೀಡಲಿದೆ. ಇದು ಹಗಲಿರುಳು ಕಷ್ಟಪಟ್ಟು ಓದಿ ಎಕ್ಸಾಮ್ ಬರೆದಿರೋ ಪ್ರಾಮಾಣಿಕ ಸ್ಟೂಡೆಂಟ್ಸ್‌ಗೆ ಸಿಕ್ಕಿರೋ ಒಂದು ದೊಡ್ಡ ರಿಲೀಫ್ ಮತ್ತು ಭರವಸೆ ಅಂತಾನೇ ಹೇಳಬಹುದು.






