ಚಿತ್ರದುರ್ಗ, (ಅ.28) : ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ‘ನನ್ನ ನಾಡು ನನ್ನ ಹಾಡು’ ಅಭಿಯಾನದಲ್ಲಿ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿಗಳಾದ ಎನ್ ಆರ್ ತಿಪ್ಪೇಸ್ವಾಮಿ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎ ಪರುಶರಾಮ್, ಪ್ರಭಾರ ಪ್ರಾಂಶುಪಾಲರಾದ ಡಾ.ಬಿ.ಜಿ.ಕುಮಾರಸ್ವಾಮಿ, ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಶ್ರೀ ಜಯಣ್ಣ, ಶ್ರೀಮತಿ ರಮಾ ದೇವಿ ವೆಂಕಣ್ಣಚಾರ್, ವಿವಿಧ ಇಲಾಖಾ ಮುಖ್ಯಸ್ಥರು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ದೈಹಿಕಶಿಕ್ಷಣ ನಿರ್ದೇಶಕ ಡಾ.ಕೆ.ಕುಮಾರಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕೋಟಿ ಕಂಠ ಗಾಯನದಲ್ಲಿ ರಾಷ್ಟ್ರಕವಿ ಕುವೆಂಪುರವರ ‘ನಾಡಗೀತೆ, ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ಚೆಲುವು ಕನ್ನಡನಾಡು’ ರಾಷ್ಟ್ರಕವಿ ಕುವೆಂಪುರವರ “ ಬಾರಿಸು ಕನ್ನಡ ಡಿಂಡಿಮವ”, ಡಾ.ಡಿ.ಎಸ್.ಕರ್ಕಿರವರ “ಹಚ್ಚೇವು ಕನ್ನಡ ದೀಪ”, ಶ್ರೀ ಚೆನ್ನವೀರ ಕಣವಿರವರ ’ವಿಶ್ವವಿನೂತನ ವಿದ್ಯಾಚೇತನ’, ಡಾ.ಹಂಸಲೇಖರವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು”, ಗೀತೆಗಳನ್ನು ಶ್ರೀಮತಿ ಮೀನಾಕ್ಷಿ ಭಟ್ ಹಾಗು ತಂಡದವರು, ಉಪನ್ಯಾಸಕ ಚೇತನ್.ಎಸ್ ರವರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗು ಸಿಬ್ಬಂದಿಯವರ ಜೊತೆ ಹಾಡುವ ಮೂಲಕ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಕನ್ನಡ ಹಾಡುಗಳನ್ನು ಚಪ್ಪಾಳೆ ತಟ್ಟಿ ಹಾಡುವುದರೊಂದಿಗೆ ಸಂಭ್ರಮ ಮೆರೆದೆರು.
ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎ ಪರುಶರಾಮ್ ಕನ್ನಡ ಬಳಕೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಮಾರಂಭದಲ್ಲಿ ಭೂಮಿಕ ಸಿ ನಿರೂಪಿಸಿ, ಜೀವಿತ ವಂದಿಸಿದರು,