Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೋಟೆಕಲ್ಲು ರಂಗನಾಥಸ್ವಾಮಿ ದೇವಸ್ಥಾನ : ದುಗ್ಗಾವರದ ಕೆಲವು ಗ್ರಾಮಸ್ಥರ ಕಿರುಕುಳ : ಕ್ರಮಕ್ಕೆ ಅಪರ ಜಿಲ್ಲಾಧಿಕಾರಿಗೆ ದೂರು

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.26  : ದುಗ್ಗಾವರ ಗ್ರಾಮದ ಕೋಟೆಕಲ್ಲು ರಂಗನಾಥಸ್ವಾಮಿ ದೇವರ ಪೂಜಾರಿಕೆಯನ್ನು ಪೂರ್ವದ ಮೈಸೂರು ಮಹಾರಾಜದ ಕಾಲದಿಂದಲೂ ಮುನ್ನಡೆಸಿಕೊಂಡು ಬರುತ್ತಿದ್ದು, ಪೂರ್ವಜರು ಉಳುಮೆ ಮಾಡುತ್ತಿದ್ದ ದೇವರ ಜಮೀನನ್ನು ಇಂದಿಗೂ ಅನುಭವಿಸಿಕೊಂಡು ಬರುತ್ತಿರುವುದಕ್ಕೆ ದುಗ್ಗಾವರ ಗ್ರಾಮದ ಕೆಲವು ಪ್ರಭಾವಿಗಳು ನಮಗೆ ಹಿಂಸೆ ಕಿರುಕುಳ ನೀಡುತ್ತಿರುವುದರಿಂದ ಸೂಕ್ತ ರಕ್ಷಣೆ ಒದಗಿಸುವಂತೆ ಹೊಸದುರ್ಗ ತಾಲ್ಲೂಕು ಮಾಡದಕೆರೆ ಹೋಬಳಿ ದುಗ್ಗಾವರ ಗ್ರಾಮದ ಪೂಜಾರ್ ವಂಶದ ಶ್ರೀಮತಿ ಇ.ವೀಣ ಮತ್ತು ಕುಟುಂಬದವರು ಗುರುವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸರ್ವೆ ನಂ.17 ವಿಸ್ತೀರ್ಣ 9 ಎಕರೆ 12 ಗುಂಟೆ ಜಮೀನನ್ನು ಪೂಜಾರಿಕೆ ಮಾಡಿ ಅನುಭವಿಸಿಕೊಂಡು ಬರುತ್ತಿದ್ದೇವೆ. ನಮ್ಮ ಅಜ್ಜಂದಿರ ನಿಧನದ ನಂತರ ಸಣ್ಣ ಅಜ್ಜ ಪೂಜಾರಿ ರಂಗಪ್ಪನ ಹೆಸರಿಗೆ ಟೆನೆನ್ಸಿ ಕಾಯಿದೆಯಡಿಯಲ್ಲಿ 1980 ರಲ್ಲಿ ಸರ್ಕಾರದಿಂದ ಆದೇಶವಾಗಿರುವುದರಿಂದ ಸದರಿ ಜಮೀನಿನಲ್ಲೆ ಮನೆ ಕಟ್ಟಿಕೊಂಡು ಅಡಿಕೆ ತೆಂಗು ಬೆಳೆಯುತ್ತ ರಂಗನಾಥಸ್ವಾಮಿ ದೇವರ ಪೂಜೆ ಮಾಡಿಕೊಂಡು ಬರುತ್ತಿದ್ದೇವೆ. ಸಣ್ಣ ಅಜ್ಜ ರಂಗಪ್ಪ ತೀರಿದ ಮೇಲೆ ನಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಕೆಲವು ಪ್ರಭಾವಿಗಳು ಅಡ್ಡಿಪಡಿಸುತ್ತಿದ್ದಾರೆಂದು ಅಪರ ಜಿಲ್ಲಾಧಿಕಾರಿ ಗಮನಕ್ಕೆ ತಂದ ಶ್ರೀಮತಿ ಇ.ವೀಣ ದುಗ್ಗಾವರ ಗ್ರಾಮದ ಜಿ.ಆರ್.ಪರಮೇಶ್ವರಪ್ಪ, ಡಿ.ಕೆ.ರುದ್ರಸ್ವಾಮಿ, ಬಿ.ಎನ್.ಮಂಜುನಾಥ್, ಬಿ.ಎಲ್.ಜಯಪ್ಪ, ಹೆಚ್.ಕೆ.ದ್ಯಾಮಪ್ಪ, ಅಶೋಕಪ್ಪ, ಪಿ.ಟಿ.ರಂಗಪ್ಪ, ಶಿವಕುಮಾರ್, ಹೆಚ್.ಎಸ್.ರಂಗಸ್ವಾಮಿ, ಓಂಕಾರಪ್ಪ, ಮಹೇಶ, ಡಿ.ಆರ್.ತಿಪ್ಪೇಸ್ವಾಮಿ, ಅರಳಿ ನಾಗರಾಜ್, ಮಂಜು, ರಮೇಶ, ಇವರುಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ನನ್ನ ಗಂಡ ತಿಮ್ಮೇಶಿ, ಮಾವ ಶಿವರುದ್ರಪ್ಪ, ಮೈದುನ ತೀರ್ಥಪ್ರಸನ್ನ ಇವರುಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಅಪರ ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದರು.

ಶಿವರುದ್ರಪ್ಪ, ಜಯಣ್ಣ, ದಿನೇಶ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೋದಿ ನನ್ನ ಹೃದಯದಲ್ಲಿದ್ದಾರೆ, ಫೋಟೋ ಬಳಕೆಗೆ ಅನುಮತಿ ಸಿಕ್ಕಿದೆ : ಕೆ. ಎಸ್. ಈಶ್ವರಪ್ಪ

    ಶಿವಮೊಗ್ಗ: ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕೆ ಎಸ್ ಈಶ್ವರಪ್ಪ ಶಿವಮೊಗ್ಗ ಅಖಾಡದಲ್ಲಿ ನಿಂತಿದ್ದಾರೆ. ಆರಂಭದಿಂದಲೂ ಪ್ರಧಾನಿ ಮೋದಿಯವರ ಫೋಟೋವನ್ನೇ ಬಳಕೆ ಮಾಡಿಕೊಳ್ಳುತ್ತಿದ್ದರು. ಆದರೆ ಬಿಜೆಪಿ ನಾಯಕರು

ಹೊರಗೆ ಬಾರದಂತೆ ಮೈಸೂರಿಗರಿಗೆ ಹವಮಾನ ಇಲಾಖೆಯಿಂದ ಎಚ್ಚರಿಕೆ : ಆರೆಂಜ್ ಅಲರ್ಟ್ ಘೋಷಣೆ

ಮೈಸೂರು: ಬೆಳಗಿನ ಜಾವವೇ ಬಿಸಿಲಿನ ತಾಪ ಜೋರಾಗಿರುತ್ತೆ. ಮೇ ಸಮಯಕ್ಕೆ ಅದಾಗಲೇ ಭೂಮಿ ತಂಪಾಗಬೇಕಿತ್ತು. ಆದರೆ ಧಗೆ ಎಷ್ಟಿದೆ ಅಂದ್ರೆ ಹೊರಗೆ ಬರೋದಕ್ಕೆ ಸಾಧ್ಯವಾಗುತ್ತಿಲ್ಲ. ದಾಹವೂ ಹೆಚ್ಚಾಗಿದೆ. ಪಾನೀಯಗಳ ಬೆಲೆಯೂ ಗಗನಕ್ಕೇರುತ್ತಿದೆ. ಅದರಲ್ಲೂ ಕೆಲವು

ಮೇ 8 ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ..?

ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಬಂದಿದೆ. ಭವಿಷ್ಯದ ಮುಖ್ಯ ಘಟ್ಟದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯು ಒಂದು. ಈಗಾಗಲೇ ಪರೀಕ್ಷೆ ಬರೆದ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಕರ್ನಾಟಕ ಪ್ರೌಢ

error: Content is protected !!