ಸುದ್ದಿಒನ್, ಕೊಪ್ಪಳ, ಜನವರಿ. 13 : ತಾಲೂಕಿನ ಗುಡದಳ್ಳಿ ಗ್ರಾಮದ ಸ್ವಾಮಿ ವಿವೇಕಾನಂದ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆಯ ಅಡಿಯಲ್ಲಿ ಇರುವ ಸ್ವಾಮಿ ವಿವೇಕಾನಂದ ಶಾಲೆಯ 14ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿವೇಕ ಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ರವಿವಾರ ಜರುಗಿತು.
ಕಾರ್ಯಕ್ರಮವನ್ನು ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರಾದ ಶಾಹಿದ್ ಹುಸೇನ ತಹಶಿಲ್ದಾರ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಹೊಳೆಯಾಚೆ ವಹಿಸಿದ್ದರು.
ಇದೇ ಸಮಯದಲ್ಲಿ ಈ ವರ್ಷದ ವಿವೇಕ ಸಿರಿ ಪ್ರಶಸ್ತಿಯನ್ನು ಶಿಕ್ಷಣ ಮತ್ತು ಹೋರಾಟದ ಸೇವೆಗಾಗಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ, ಸಮಾಜಿಕ ಸೇವೆಗಾಗಿ ಮಾರ್ಕಂಡೆಪ್ಪ ಏಣಿಗಿ,ಸಂಗೀತ್ರದಲ್ಲಿ ತುಳಸೋಜಿರಾವ್ ಚೌವಾಣ,ಆಯುರ್ವೇದಿಕ್ ಸೇವೆಗಾಗಿ ಮೂರ್ತೇಪ್ಪ ಜಂತ್ರಿ,ವನ್ಯಜೀವಿಗಳ ಕ್ಷೇತ್ರಕ್ಕಾಗಿ ವಸಂತ ಶಿಳ್ಳೆಕ್ಯಾತರ ಅವರಿಗೆ ನೀಡಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ.ಈ ಪ್ರಶಸ್ತಿಯನ್ನು ಕಲರವ ಶಿಕ್ಷಕರ ಸೇವಾ ಬಳಗಕ್ಕೆ ಅರ್ಪಣೆ ಮಾಡಲಾಗುತ್ತದೆ.ವಿದ್ಯಾರ್ಥಿಗಳು ಸಮಯವನ್ನು ಸರಿಯಾದ ರೀತಿಯಲ್ಲಿ ಬಳಿಸಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿಯಾಗುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಈ ಸಮಯದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಶಿವಲಿಂಗಪ್ಪ ತಿಪ್ಪನ್ನವರ,ಕಾರ್ಯದರ್ಶಿ ರಮೇಶ ಹೊಳೆಯಾಚೆ,ಮುಖಂಡರಾದ ಕನಕಪ್ಪ ಮುದ್ಲಾಪೂರ,ಗುಡದಪ್ಪ ದೊಡ್ಡಮನಿ, ಪಾಲಕ್ಷಯ್ಯಾ ಇಂದರಗಿಮಠ, ಬಸವರಾಜ ಗೊಲ್ಲರ, ಫಕೀರಪ್ಪ ಅಜ್ಜಿ,ಸಿ.ಆರ್.ಪಿ.ಸಂಜೀವಕುಮಾರ, ಕಲರವ ಶಿಕ್ಷಕರ ಸೇವಾ ಬಳಗದ ಸದಸ್ಯರಾದ ಕಾಶಿನಾಥ,ಹನುಮಂತಪ್ಪ ಕುರಿ,ಅಣ್ಣಪ್ಪ ಹಳ್ಳಿ,ಶರಣಪ್ಪ ರಡ್ಡೇರ,ಮಲ್ಲಪ್ಪ ಗುಡದನ್ನವರ,ಗುರುಸ್ವಾಮಿ.ಆರ್.,ವಿರೇಶ ಕೌಟಿ,ಹುಲುಗಪ್ಪ ಭಜಂತ್ರಿ,ಮದುಸೂಧನ ಡೊಳ್ಳಿನ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕರಾದ ನಾಗರಾಜ ಬಡಿಗೇರ ನಿರೂಪಸಿದರು. ಶಿಕ್ಷಕರಾದ ಶಿವಪ್ಪ ಜೋಗಿನ ಸ್ವಾಗತಿಸಿ,ಫಕೀರಪ್ಪ ಅಜ್ಜಿ ವಂದಿಸಿದರು.
ಪೋಟೊ:ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ವಿವೇಕ ಸಿರಿ ಪ್ರಶಸ್ತಿ ಪ್ರದಾನ ಮಾಡಿದರು.