ಮಮತಾ ಬ್ಯಾನರ್ಜಿ ವಿಡಿಯೋ ಅಪ್ಲೋಡ್ ಮಾಡಿದ್ದ ಯೂಟ್ಯೂಬರ್ ಅರೆಸ್ಟ್..!

ಕೋಲ್ಕತ್ತಾ: ಇತ್ತೀಚೆಗೆ ಸಾಕಷ್ಟು ಯೂಟ್ಯೂಬ್ ಗಳಲ್ಲಿ ಫೇಕ್ ಮಾಹಿತಿ ಸಿಗುತ್ತದೆ. ಜೊತೆಗೆ ವೀವ್ಸ್ ಗೋಸ್ಕರ ಏನೇನೋ, ಯಾವುದ್ಯಾವುದೋ ಕಂಟೆಂಟ್ ಗಳನ್ನು ಅಪ್ಲೋಡ್ ಮಾಡುತ್ತಾರೆ. ಪಶ್ಚಿಮ ಬಂಗಾಳದ ಸಿಎಂ ಬಗ್ಗೆ ಇದೇ ರೀತಿ ಮಾಡಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿರುವ ವಿಡಿಯೋ ಅಪ್‌ ಲೋಡ್ ಮಾಡಿದ್ದ ಯೂಟ್ಯೂಬರ್ ರೊದ್ದೂರ್ ರಾಯ್ ಅವರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.

ಸುಮಾರು 3,23,000 ಚಂದಾದಾರರನ್ನು ಹೊಂದಿರುವ ರಾಯ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಅವಹೇಳನಕಾರಿ ಕಾಮೆಂಟ್‌ ಗಳೊಂದಿಗೆ ಇಂತಹ ವಿಡಿಯೋಗಳನ್ನು ಅಪ್‌ ಲೋಡ್ ಮಾಡಿರುವುದು ಇದೇ ಮೊದಲಲ್ಲ. ಭಾನುವಾರ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸುವ ವಿಡಿಯೋ ಪೋಸ್ಟ್ ಮಾಡಿದ ನಂತರ ರಾಯ್ ವಿರುದ್ಧ ಅನೇಕ ದೂರುಗಳು ಬಂದಿವೆ ಎಂದು ನಗರ ಪೊಲೀಸ್ ಪತ್ತೇದಾರಿ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *