ವಿರಾಟ್ ಕೊಹ್ಲಿಯ ಟ್ವಿಟ್ಟರ್ ಪೋಸ್ಟ್ ಒಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ತಾ ಮುಂದು ನಾ ಮುಂದು ಅಂತ ಕೊಹ್ಲಿಗೆ ಸಮಾಧಾನ ಮಾಡುವವರೇ ಹೆಚ್ಚಾಗಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕನಿಗೆ ಅಂತದ್ದೇನಾಯ್ತು ಅಂತ ಗೊತ್ತಿಲ್ಲದೆ ಇರುವವರು ಅವರ ಟ್ವಿಟ್ಟರ್ ಓಪನ್ ಮಾಡಿ ನೋಡಿದರೆ, ಅವರಿಗೂ ಬೇಸರವಾಗಿದೆ. ಅಯ್ಯೋ ಪಾಪ, ಹಿಂಗೆ ಆಗಬಾರದಿತ್ತು ಅನ್ನೊ ಸಮಾಧಾನ ನೋಡಿದವರು ಮಾಡುತ್ತಿದ್ದಾರೆ. ಅಷ್ಟಕ್ಕೂ ಕೊಹ್ಲಿಗೆ ಏನಾಯಿತು ಗೊತ್ತಾ..?
ಯಾರೇ ಆಗಲಿ ತಾವಿಷ್ಟ ಪಟ್ಟ ವಸ್ತುವನ್ನು ಕಳೆದುಕೊಂಡರೆ ಅದಕ್ಕಿಂತ ನೋವು ಮತ್ತೊಂದಿಲ್ಲ. ಅದರಲ್ಲೂ ತುಂಬಾ ಇಷ್ಟಪಟ್ಟ ವಸ್ತು, ಆರ್ಡರ್ ಮಾಡಿ, ಇನ್ನೇನು ಕೈಗೆ ಸಿಗಬೇಕು, ಓಪನ್ ಮಾಡಿ ಖುಷಿ ಪಡಬೇಕು ಎನ್ನುವಷ್ಟರಲ್ಲಿ ಆ ವಸ್ತುವೇ ಕಳೆದು ಹೋದರೆ. ಅಬ್ಬಬ್ಬಾ ಆ ಮಾನಸಿಕ ಕಿರಿಕಿರಿ, ಬೇಸರ ತಡೆದುಕೊಳ್ಳುವುದಕ್ಕೆ ಆಗಲ್ಲ. ಈಗ ಕೊಹ್ಲಿಗೂ ಅದೇ ಆಗ್ತಿದೆ.
ವಿರಾಟ್ ಕೊಹ್ಲಿ ಬೇಕು ಅಂದ್ರೆ ಎಷ್ಟು ಲಕ್ಷದ ಮೊಬೈಲ್ ಗಳನ್ನು ಶಾಪಿಂಗ್ ಮಾಡಬಹುದು. ಆದರೆ ಅವರು ಆರ್ಡರ್ ಮಾಡಿದ ಮೊಬೈಲ್ ಒಂದು ಕಳೆದು ಹೋಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೊಹ್ಲಿ, “ಅನ್ ಬಾಕ್ಸ್ ಮಾಡದೆಯೆ ಹೊಸ ಫೋನನ್ನು ಕಳೆದುಕೊಂಡಿರುವ ಭಾವನೆಯೂ ಯಾವುದನ್ನು ಮೀರಿಸುತ್ತದೆ. ಯಾರಾದರೂ ಆ ಕ್ಷಣವನ್ನು ಫೀಲ್ ಮಾಡಿದ್ದೀರಾ..?” ಎಂದು ಕೇಳಿದ್ದಾರೆ.