ಬೆಂಗಳೂರು: ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದರೆ ಅದೆಲ್ಲವೂ ಸತ್ಯವೇ ಆಗಿದೆ. ಅದರಲ್ಲೂ ಮಳೆ, ಬೆಳೆ ವಿಚಾರದಲ್ಲಿ, ರಾಜ್ಯ, ಕೇಂದ್ರ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಅದು ಕೂಡ ಸಾಕಷ್ಟು ಬಾರಿ ಸತ್ಯವಾಗಿದೆ. ಆದರೆ ಇದೀಗ ರಾಜ್ಯ ಹಾಗೂ ಕೇಂದ್ರ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಆ ಭವಿಷ್ಯ ಏನು ಎಂಬುದು ಇಲ್ಲಿದೆ ನೋಡಿ.
ಕೆ.ಎನ್.ರಾಜಣ್ಣ ಕಳೆದ ಕೆಲವು ದಿನಗಳ ಹಿಂದಷ್ಟೇ ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಮಾತನಾಡಿದ್ದರು. ರಾಜಕೀಯದಲ್ಲಿ ಸೆಪ್ಟೆಂಬರ್ ಕ್ರಾಂತಿ ಆಗಲಿದೆ ಎಂದಿದ್ದರು. ಆದರೆ ಈಗ ನೋಡಿದ್ರೆ ರಾಜಣ್ಣ ಅವರ ತಲೆದಂಡವಾಗಿದೆ. ಸಚಿವ ಸ್ಥಾನದಿಂದ ರಾಜಣ್ಣ ಅವರನ್ನೇ ವಜಾ ಮಾಡಿದ್ದಾರೆ. ಈ ಹಿನ್ನೆಲೆ ಕೋಡಿಶ್ರೀಗಳ ಭವಿಷ್ಯದ ಬಗ್ಗೆ ಚರ್ಚೆಯಾಗ್ತಾ ಇದೆ.
ಇಂದು ಕೋಡಿ ಮಠದ ಶ್ರೀಗಳು ನುಡಿದಿರುವ ಭವಿಷ್ಯದ ಪ್ರಕಾರ, ನೀಚನಾದವನು ದೊರೆ ಆದ್ರೆ, ಹೇಡಿಯು ಸೇನಾ ನಾಯಕನಾದ್ರೆ, ದಡ್ಡ ಗುರುವಾದ್ರೆ ಆ ರಾಜ್ಯ ನಾಶವಂತೂ ಖಚಿತ. ಈ ಮೂರು ಒಂದು ರಾಜ್ಯಕ್ಕೆ ತುಂಬಾ ಮುಖ್ಯ ಎಂದು ಕೋಡಿಮಠ ಸ್ವಾಮೀಜಿ ಹೇಳಿದ್ದಾರೆ. ಕೋಡಿ ಮಠದ ಶ್ರೀಗಳ ಮಾತಿಗೂ, ಇಂದಿನ ರಾಜಕೀಯದ ಬೆಳವಣಿಗೆಗೂ ಸಾಕಷ್ಟು ಚರ್ಚೆಗಳಾಗ್ತಾ ಇದೆ.
ಕೆ.ಎನ್. ರಾಜಣ್ಣ ಈ ಮೊದಲು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಬೇಕು ಅಂತಾನೂ ಚರ್ಚೆ ಹುಟ್ಟು ಹಾಕಿದ್ದರು. ಹೈಕಮಾಂಡ್ ನಾಯಕರ ತನಕವೂ ಈ ವಿಚಾರವನ್ನು ಮುಟ್ಟಿಸಿದ್ದರು. ಆ ಸಂದರ್ಭದಲ್ಲಿ ಸುರ್ಜೆವಾಲ ಅವರು ಸಭೆಯನ್ನು ಕೂಡ ಕರೆದಿದ್ದರು. ಈ ರೀತಿಯ ಕೆಲವೊಂದು ವಿಚಾರಗಳೇ ರಾಜಣ್ಣ ಅವರ ತಲೆದಂಡಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇದೀಗ ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದು, ಏನೆಲ್ಲಾ ಬೆಳವಣಿಗೆಗಳು ಆಗುತ್ತವೆ ನೋಡಬೇಕಿದೆ.






