ಕರುನಾಡಿನ ಬಗ್ಗೆ ಕೋಡಿಶ್ರೀ ಭವಿಷ್ಯ.. ಜಲಕಂಟಕದ ಬಗ್ಗೆ ಸೂಚನೆ..!

suddionenews
1 Min Read

ಹುಬ್ಬಳ್ಳಿ: ಕೋಡಿಮಠದ ಶ್ರೀಗಳು ನುಡಿದ ಭವಿಷ್ಯದ ನುಡಿ ಸಾಕಷ್ಟು ಬಾರಿ ನಿಜವಾಗಿದೆ. ಇದೀಗ ಮತ್ತೆ ಕರ್ನಾಟಕದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಜಲಪ್ರಳಯವಾಗಲಿದೆ ಎಂಬ ಸೂಚನೆ ನೀಡಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ಕರ್ನಾಟಕಕ್ಕೆ ಪ್ರವಾಹದ ಸ್ಥಿತಿ ಅನುಭವಿಸಿದೆ. ಈಗ ಮತ್ತೆ ಜಲಕಂಟಕದ ಬಗ್ಗೆ ಜನ ಆತಂಕಗೊಂಡಿದ್ದಾರೆ.

ಕರುನಾಡಿಗೆ ಕೆಲವೊಂದು ಆಪತ್ತಿದೆ. ಕೆಲವು ಸಾವು, ನೋವುಗಳು ಇದೆ. ಆದರೆ ದೈವ ಕೃಪೆಯಿಂದ ಪಾರಾಗುತ್ತದೆ. ಜಾಗತಿಕಮಟ್ಟದಲ್ಲಿ ಪ್ರಳಯ ಆಗುವುದು. ಮಳೆ ಬೆಳೆಗಳು ತಲ್ಲಣಗೊಂಡಾವು. ಆದರೆ ಎಲ್ಲದನ್ನು ತಪ್ಪಿಸುವುದು ಆಳುವವರ ಕೈಯಲ್ಲಿದೆ. ಈ ಭಾರತ ದೇಶದಲ್ಲಿ ಒಂದು ಘಟನೆ ಆಗಿಯೇ ಆಗುತ್ತದೆ. ನಾನು ಹೇಳಿದಂತೆ ಈಗಾಗಲೇ ನಡೆದಿದೆ. ಕರುನಾಡಿಗೆ ಮಳೆ ಬರುತ್ತೆ, ಬರಲ್ಲ ಅಂತ ಏನಿಲ್ಲ, ಬರುತ್ತೆ ಎಂದಿದ್ದಾರೆ.

ಇನ್ನು ಸರ್ಕಾರದ ಬಗ್ಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಸ್ಥಿರವಾಗಿರುತ್ತದೆ. ಒಬ್ಬರೇ ಅಂತ ನಾನು ಏನನ್ನು ಹೇಳುವುದಿಲ್ಲ ಎಂದು ಉತ್ತರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *