ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗಾಗಿ ಕಾಂಗ್ರೆಸ್ ಪಕ್ಷದವರು ಪಾದಯಾತ್ರೆ ನಡೆಸಲು ಸಜ್ಜಾಗಿದ್ದಾರೆ. ಈ ಬಗ್ಗೆ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ವ್ಯಂಗ್ಯವಾಡಿದ್ದಾರೆ. ಮೇಕೆದಾಟು ಯೋಜನೆಗೆ ಬೇಡಿಕೆ ಇಟ್ಟಿದ್ದೇ ನಾವು ಎಂದಿದ್ದಾರೆ.

ನಿಮ್ಮ ಸರ್ಕಾರವಿದ್ದಾಗ ಮೇಕೆದಾಟು ಯೋಜನೆಗೆ ಏನು ಮಾಡಿದ್ರಿ..? ನೀವೆ ಅಧಿಕಾರದಲ್ಲಿದ್ರಿ. ಆಗ ಕ್ರಮ ಕೈಗೊಂಡಿಲ್ಲ ಈಗ್ಯಾಕೆ ಮಾಡ್ತಾ ಇದ್ದೀರಾ..? ಒಕ್ಕಲಿಗರನ್ನ ಬಡಿದೆಬ್ಬಿಸಲು ಹೊರಟಿದ್ದೀರೋ ಅಥವಾ ರಾಜಕೀಯ ಸ್ಟಾಟರ್ಜಿಯಾ. ಕಾಂಗ್ರೆಸ್ ಮೇಕೆದಾಟು ಯೋಜನೆ ಶುದ್ಧ ನಾನ್ ಸೆನ್ಸ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.

ಮೇಕೆದಾಟು ಯೋಜನೆ ಬಹಳ ಉಪಯುಕ್ತವಾದದ್ದು. ಮೇಕೆದಾಟು ಯೋಜನೆಗೆ ಸಿಎಂ ಆದಷ್ಟು ಬೇಗ ಅಡಿಗಲ್ಲು ಹಾಕಬೇಕು. ಇಲ್ಲವಾದಲ್ಲಿ ಆ ಯೋಜನೆಗೆ ರೈತರೆ ಅಡಿಗಲ್ಲು ಹಾಕುತ್ತಾರೆ ಎಂದಿದ್ದಾರೆ.

