ಸುದ್ದಿಒನ್, ಹಿರಿಯೂರು : ಕೋಡಿಹಳ್ಳಿ ಆದಿಜಾಂಬವ ಬೃಹನ್ಮಠದ ಮಠದ ಹಿರಿಯ ಶ್ರೀಗಳಾದ ಮಾರ್ಕಂಡೇಯ ಮುನಿಸ್ವಾಮಿಜೀ (75) ಗುರುವಾರ ಸಂಜೆ ನಿಧನರಾದರು.
ತಾಲ್ಲೂಕಿನ ಕೋಡಿಹಳ್ಳಿ ಆದಿಜಾಂಬವ ಮಠದಲ್ಲಿ ಸಂಜೆ 5.30 ರ ಸಮಯದಲ್ಲಿ ದಿಢೀರನೆ ಉಸಿರಾಟದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರಿೆ. ವೈದ್ಯರು ತಪಾಸಣೆ ನಡೆಸುವಷ್ಟರಲ್ಲಿ ಶ್ರೀಗಳು ವಿಧವಶರಾಗಿದ್ದರು.
ತಕ್ಷಣ ಕಾರಿನಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆರಾಗಿದ್ಗೆ ದಾಖಲಿಸಲಾಗಿದೆ. ಆದರೆ ವೈದ್ಯರು ತಪಾಸಣೆ ಮಾಡಿದ್ದಾರೆ. ಆದರೆ ಅಷ್ಟೋತ್ತಿಗಾಗಲೇ ಶ್ರೀಗಳು
ಕೊನೆಯುಸಿರೆಳೆದಿರುವುದನ್ನು ವೈದ್ಯರು ದೃಢಪಡಿಸಿದರು.
ಶುಕ್ರವಾರ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಠದ ಮೂಲಗಳಿಂದ ತಿಳಿದು ಬಂದಿದೆ.
ಶ್ರೀಗಳು ಆದಿ ಜಾಂಬವ ಮುನಿವಂಶ ಪಾರಂಪಯಿಂದ ಕಾಷಾಯ ಧರಿಸಿ ಶ್ರೀಮಠದ ಸೇವೆಯಲ್ಲಿ ತೊಡಗಿದ್ದು, ಪ್ರತಿ ವರ್ಷ ಸಾಮೂಹಿಕ ವಿವಾಹ ಹಾಗೂ ಕೋಡಿಹಳ್ಳಿ ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಶ್ರೀ ರೇಣುಕಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಿದ್ದ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮದ ಏರ್ಪಡಿಸಿಕೊಂಡು ಬರುತ್ತಿರುವುದು ಶ್ರೀಗಳ ಮಹಾ ಕಾರ್ಯವಾಗಿತ್ತು.
ಶ್ರೀಗಳ ನಿಧನಕ್ಕೆ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್, ಮಾಜಿ ಸಚಿವ ಡಿ. ಸುಧಾಕರ್, ಮಾಜಿ ಸಂಸದ ಚಂದ್ರಪ್ಪ, ಕೇಂದ್ರ ಸಚಿವ, ಹಿಂದುಳಿದ ಮಠಾಧೀಶರು ಸೇರಿದಂತೆ ಅಪಾರ ಭಕ್ತ ಸಮೂಹದವರು ಸಂತಾಪ ಸೂಚಿಸಿದ್ದಾರೆ.