ಸುದ್ದಿಒನ್, ಚಿತ್ರದುರ್ಗ, ಜೂನ್. 19 : ಜ್ಞಾನದೇಗುಲದಿಂದ ಪಡೆದ ಜ್ಞಾನ ಬದುಕನ್ನು ಹಸನುಗೊಳಿಸುತ್ತದೆ. ಮಠಮಾನ್ಯಗಳ ಶಾಲೆಗಳಿಂದ ಕಲಿತ ವಿದ್ಯೆ ಉತ್ತಮ ಸಂಸ್ಕøತಿ ಮತ್ತು ಸಂಸ್ಕಾರವನ್ನು ರೂಪಿಸುತ್ತದೆ. ಮಾನಸಿಕ ಮತ್ತು ದೈಹಿಕ ಸ್ಥಿತಿಗತಿಗಳು ವ್ಯತ್ಯಯಗೊಳ್ಳದೆ ಸಮತೋಲನ ಕಂಡುಕೊಡುತ್ತವೆ ಎಂದು ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಡಾ.ಕೆ.ಎಂ.ವೀರೇಶ್ ತಿಳಿಸಿದರು.
ಜೂನ್ 19 ರಂದು ಶುಕ್ರವಾರ ಬೆಳಿಗ್ಗೆ 10-30ಕ್ಕೆ ನಗರದ ರಾ.ಹೆ.50ರಲ್ಲಿರುವ ವಿದ್ಯಾಭಾರತಿ ಜ್ಞಾನಮಂದಿರ ಪ್ರೌಢಶಾಲಾ ಆವರಣದಲ್ಲಿ ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಕನ್ನಡ ಗೀತಗಾಯನ ಸಂಭ್ರಮ 2026-27 ಅಂಗವಾಗಿ ವಿದ್ಯಾರ್ಥಿಗಳಿಗೆ ನಾಡಗೀತೆ, ರೈತಗೀತೆ, ರಾಷ್ಟ್ರಗೀತೆ ಮತ್ತು ರಾಷ್ಟ್ರೀಯಗೀತೆ ವಂದೇ ಮಾತರಂ ವಿವಿಧ ದೇಶಭಕ್ತಿ ಹಾಗೂ ಕನ್ನಡಗೀತೆಗಳ ಗಾಯನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಐಕ್ಯತೆಯನ್ನು ಪ್ರತಿನಿಧಿಸುವ ನಾಡಗೀತೆಯಂತಹ ಗೀತೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಬರುವ ಪ್ರತಿಯೊಂದೂ ಪದಗಳು, ಹೆಸರುಗಳು ಸಮಸ್ತ ಭಾರತೀಯರ ಬೃಹತ್ಗ್ರಂಥಗಳಾಗಿವೆ. ಅವುಗಳ ಬಗೆಗಿನ ನಿರಂತರ ಓದುವಿಕೆ ಮಕ್ಕಳನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುತ್ತದೆ ಎಂದರು.
ನಿವೃತ್ತ ಮುಖ್ಯಶಿಕ್ಷಕ ಹಾಗೂ ಸಾಹಿತಿ ಹುರುಳಿ ಬಸವರಾಜ್ ನಮ್ಮ ನಾಡು ನುಡಿ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತ ಕರ್ನಾಟಕ ರಾಜ್ಯ ಸಂಪತ್ಭರಿತ ನಾಡು. ಹಸಿರಾದ ನಾಡು, ಪೌರಾಣಿಕ, ಐತಿಹಾಸಿಕ ಮತ್ತು ಚಾರಿತ್ರಿಕ ಹಿನ್ನೆಲೆ ಇರುವ ಕರ್ನಾಟಕದ ನಾಡು, ನುಡಿ, ಸಂಸ್ಕøತಿ ಪ್ರತಿಯೊಬ್ಬ ವಿದ್ಯಾರ್ಥಿಯ ಶ್ರೀಮಂತ ಸಂಪನ್ಮೂಲಗಳಾಗಿವೆ. ಭವಿಷ್ಯದಲ್ಲಿ ಉತ್ತಮ ಸಮಾಜವನ್ನು ಪ್ರತಿನಿಧಿಸಬೇಕಾದರೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕನ್ನಡಗೀತೆಗಳ ಸಾರಸ್ವತ ಲೋಕವನ್ನು ಅರಿತು ವಿದ್ಯಾರ್ಥಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.
ರಂಗಸೌರಭ ಕಲಾ ಸಂಘದ ಅಧ್ಯಕ್ಷ ಡಾ.ಕೆ.ಮೋಹನ್‍ಕುಮಾರ್ ಮಾತನಾಡಿ ಸಂಘವು ಮಕ್ಕಳಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಸೃಜನಶೀಲ ಪ್ರತಿಭೆಗಳನ್ನು ಗುರುತಿಸುತ್ತಿದೆ ಎಂದರು. ಮುಖ್ಯಶಿಕ್ಷಕಿ ಹಸೀನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯಅತಿಥಿಗಳಾಗಿ ಸಹಶಿಕ್ಷಕರಾದ ಎ.ಎಸ್.ಗಣೇಶ, ಓ.ಪಾಲಯ್ಯ, ಕೆ.ಆರ್.ಚಂದನ್, ಆರ್.ನಿಂಗರಾಜ, ಎ.ಜ್ಯೋತಿ, ದ್ವಿದಸ ಸಿ.ಕಲ್ಯಾಣ್‍ಕುಮಾರ್, ಯೋಗಶಿಕ್ಷಕ ಎಂ.ಬಿ.ಮುರುಳಿ ಹಾಗೂ ರಂಗ ಸಂಘಟಕ ಪ್ರಕಾಶ್ ಬಾದರದಿನ್ನಿ, ರಾಜ್ಯ ಯುವ ಪ್ರಶಸ್ತಿ ವಿಜೇತ ಶ್ರೀನಿವಾಸ ಮಳಲಿ ಉಪಸ್ಥಿತರಿದ್ದು ಮಾತನಾಡಿದರು.
ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಕನ್ನಡ ಗೀತಗಾಯನ ಸಂಭ್ರಮ ಕಾರ್ಯಾಗಾರ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾಭಾರತಿ ಜ್ಞಾನಮಂದಿರ ಪ್ರೌಢಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸರ್ಕಾರ ನಿಗಧಿಪಡಿಸಿದ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಮತ್ತು ರೈತಗೀತೆ, ರವೀಂದ್ರನಾಥ ಠ್ಯಾಗೋರ್ ರಚಿಸಿದ ರಾಷ್ಟ್ರಗೀತೆ ಮತ್ತು ಬಂಕಿಮಚಂದ್ರ ಚಟರ್ಜಿ ವಿರಚಿತ ಹಾಗೂ ರಾಷ್ಟ್ರೀಯಗೀತೆ ವಂದೇಮಾತರಂ ಮತ್ತು ವರಕವಿ ದ.ರಾ.ಬೇಂದ್ರೆ ವಿರಚಿತ ಬಟ್ಟಯಲ್ಲ ಬಣ್ಣವಲ್ಲ ಬೆಳಕಿನ ಈಟಿ ಮುಂತಾದ ದೇಶಭಕ್ತಿ ಹಾಗೂ ಕನ್ನಡಗೀತೆಗಳ ಸಂಗೀತ ಸಂಯೋಜನೆಯ ಪ್ರಾಯೋಗಿಕ ಗಾಯನ ತರಬೇತಿ ನೀಡಿದರು. ವಿದ್ಯಾರ್ಥಿನಿ ಚಂದನ ಪ್ರಾರ್ಥಿಸಿದರು. ಆರ್.ಸಿಂಚನ ಮತ್ತು ಕೆ.ಟಿ.ಸಾಹಿತ್ಯ ಕಾರ್ಯಕ್ರಮ ನಿರೂಪಿಸಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















