
ಹಾಸನ: ಅರಸೀಕೆರೆಯ ಶಾಸಕ ಶಿವಲಿಂಗೇಗೌಡರ ಆಡಿಯೋ ಎರಡನೇ ಬಾರಿಗೆ ವೈರಲ್ ಆಗುತ್ತಾ ಇದೆ. ಕಳೆದ ಬಾರಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವುದಾಗಿ ಮಾತನಾಡಿದ್ದರು ಎನ್ನಲಾದ ಆಡಿಯೋವೊಂದು ವೈರಲ್ ಆಗಿತ್ತು. ನಾನು ಕಾಂಗ್ರೆಸ್ ಸೇರಿದರೆ 50 ಸಾವಿರ ವೋಟ್ ಲೀಡ್ ನಲ್ಲಿ ಗೆಲ್ತೀನಿ ಎಂದಿದ್ದರು. ಈಗ ಪಕ್ಷೇತರವಾಗಿ ಈ ಬಾರಿಯ ಚುನಾವಣೆಯನ್ನು ಎದುರಿಸುತ್ತೀನಿ ಎಂದು ಹೇಳಿದ ಆಡಿಯೋ ವೈರಲ್ ಆಗಿದೆ.

ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋದಲ್ಲಿ, ಇಬ್ಬರು ಹೀಗೆ ಕಿತ್ತಾಡಿದ್ರೆ ಮುಂದಿನ ಚುನಾವಣೆಯಲ್ಲು ನಾನು ಪಲ್ಷೇತರವಾಗಿ ಸ್ಪರ್ಧಿಸುತ್ತೇನೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಬೇಡ. ಎರಡು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಒಪ್ಪದೆ ಹೋದರೆ ಪಕ್ಷೇತರನಾಗಿ ಸ್ಪರ್ಧಿಸುವೆ ಎಂದಿದ್ದಾರೆ.
ಶಿವಲಿಂಗೇಗೌಡರು ಈಗಾಗಲೇ ಜಿಡಿಎಸ್ ಪಕ್ಷದಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಯಾವ ಕಾರ್ಯಕ್ರಮಗಳಿಗೂ ಅಟೆಂಡ್ ಆಗುತ್ತಿಲ್ಲ. ಇದರ ನಡುವೆ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಕೂಡ ಹರಿದಾಡಿತ್ತು. ಇದೀಗ ಪಕ್ಷೇತರವಾಗಿ ನಿಲ್ಲಲು ಸಿದ್ಧವಾಗಿದ್ದಾರೆ.

GIPHY App Key not set. Please check settings