ಎಸ್‌ ಆರ್‌ ಎಸ್‌ ಪಿಯು ಕಾಲೇಜಿನಲ್ಲಿ ಕಿಚನೋಮಿಕ್ಸ್‌ ಸ್ಪರ್ಧೆ

 

ಚಿತ್ರದುರ್ಗ, (ಡಿ.12):  ನಗರದ ಎಸ್‌ ಆರ್‌ ಎಸ್‌ ಪಿಯು ಕಾಲೇಜಿನಲ್ಲಿ ಪ್ರತಿವರ್ಷದಂತೆ ಈ ವರ್ಷವು ಕಾಲೇಜಿನ ಎ ಪಿ ಜೆ ಅಬ್ದುಲ್‌ ಕಲಾಂ ಸೈನ್ಸ್‌ ಪಾರ್ಕಿನಲ್ಲಿ ಕಾಮರ್ಸ್‌ ವಿದ್ಯಾರ್ಥಿಗಳಿಗಾಗಿ ವ್ಯವಹಾರ ಕೌಶಲ್ಯ, ಸಂಘಟನಾ ಚತುರತೆ ಮತ್ತು  ನಿರೂಪಣಾ ಕೌಶಲ್ಯ ಅಭಿವ್ಯಕ್ತಿಗಾಗಿ “ಕಿಚನೋಮಿಕ್ಸ್‌” ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳ ವ್ಯಕ್ತಿತ್ವ  ವಿಕಸನಕ್ಕಾಗಿಯೇ ಇರುವ “ಇನ್‌ಸ್ಪೈರ್‌ ಎಸ್‌ ಆರ್‌ ಎಸ್‌” ವೇದಿಕೆಯು ಆಯೋಜಿಸಿದ್ದ “ಕಿಚನೋಮಿಕ್ಸ್” ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ಅಭಿರುಚಿಗೆ ತಕ್ಕಂತೆ ವಿಧ ವಿಧವಾದ ಖಾದ್ಯಗಳನ್ನು ತಯಾರಿಸಿ ಸಾಮಾನ್ಯ ಜ್ಞಾನ, ವೃತ್ತಿ ಕೌಶಲ್ಯ, ಸಂಘಟನಾ ಚತುರತೆ ಹಾಗೂ ನಿರೂಪಣಾ ಸಾಮರ್ಥ್ಯದಂತಹ ನೈಪುಣ್ಯತೆಗಳನ್ನು ಅಭಿವ್ಯಕ್ತಿಗೊಳಿಸಿದರು.

ಈ ವರ್ಷ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ಒಟ್ಟು ಹತ್ತು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಅವರ ಅಭಿರುಚಿಗೆ ತಕ್ಕಂತೆ ವಿವಿಧ ಖಾದ್ಯಗಳನ್ನು ತಯಾರಿಸಿ ಅದರಲ್ಲಿ ಉಪಯೋಗಿಸಿರುವ ಹಣ್ಣು, ತರಕಾರಿ, ಸಾಂಬಾರು ಪದಾರ್ಥಗಳು ಹಾಗೂ ಅವುಗಳ ಔಷದ ಗುಣಗಳು, ಪೌಷ್ಠಿಕತೆ, ಆರೋಗ್ಯಕ್ಕೆ ಲಭ್ಯವಾಗುವ ಜೀವಸತ್ವಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರು.

ಇಂದು ಮಾರುಕಟ್ಟೆಯಲ್ಲಿ ಸಿಂಹಪಾಲು ಪಡೆದಿರುವ ಖಾದ್ಯೋದಮ ಹೋಟೆಲ್‌ಗಳಲ್ಲಿ ಇಂತಹ ರುಚಿಯಾದ ಖಾದ್ಯಗಳನ್ನು ತಯಾರಿಸಿ ಗ್ರಾಹಕರ ಗಮನಸೆಳೆಯುವುದು ಹೇಗೆ, ಅವುಗಳಿಗೆ ಖರ್ಚುಮಾಡುವ ಹಣ ಹಾಗೂ ಪಡೆದುಕೊಳ್ಳುವ ಲಾಭಗಳ ಬಗ್ಗೆ ಒಂದೊಂದು ತಂಡ ತಮ್ಮದೇ ಆದ ನಿರೂಪಣಾ ಶೈಲಿಯಲ್ಲಿ ತೀರ್ಪುಗಾರರ ಎದರು ಸ್ಪಷ್ಟಪಡಿಸಿದರು.

ಎಲ್ಲಾ ತಂಡಗಳಿಗೆ 45  ನಿಮಿಷಗಳ ಕಾಲಾವಕಾಶವನ್ನು ನೀಡಲಾಗಿತ್ತು.  ಈ ಸಮಯದಲ್ಲಿ ಸಮಾರು 50 ರಿಂದ 60  ಕ್ಕೂ ಹೆಚ್ಚಿನ ಖಾದ್ಯ ಸಿದ್ದಪಡಿಸಿ, ಅವುಗಳ ವಿವರಗಳಿರುವ ಮೆನ್ಯು ಬಿಡುಗಡೆ ಮಾಡಿದರು.  ಸ್ಪರ್ಧೆಯಲ್ಲಿ ಗಮನ ಸೆಳೆವ ಪ್ರದರ್ಶನವನ್ನು ನೀಡಿದ ದ್ವಿತೀಯ ಪಿಯು ವಿಭಾಗದ “ಯುನಿಟಿ‌” ತಂಡ ಪ್ರಥಮ ಬಹುಮಾನವನ್ನು ಪಡೆದುಕೊಂಡರೆ, ದ್ವಿತೀಯ ಪಿಯು ವಿಭಾಗದ  “ಏಲೈಟ್‌ ಎಯ್ಟ್‌ ” ದ್ವಿತೀಯ ಸ್ಥಾನವನ್ನು ಪಡೆದುಕೊಂಡು,  ಪ್ರಥಮ ಪಿಯು ವಿಭಾಗದ  “ಡೆಪೋಡಿಲ್ಸ್‌” ತಂಡವು ತೃತಿಯ ಸ್ಥಾನವನ್ನು ಪಡೆದುಕೊಂಡಿತು.  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿಗಳಾದ    ಶ್ರೀಮತಿ ಸುಜಾತ ಲಿಂಗಾರೆಡ್ಡಿಯವರು, ವಾಜಿಜ್ಯ ವಿಭಾಗ ವಿದ್ಯಾರ್ಥಿಗಳಿಗೆ ಇರುವ ಈ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಮುಂದೆ ಉನ್ನತ ವ್ಯಾಸಂಗಕ್ಕೆ ಹೋದಾಗ ಹೋಟೆಲ್‌ ಮ್ಯಾನೇಜ್‌ಮೆಂಟ್, ಬಿಸಿನೆಸ್‌ ಮ್ಯಾನೇಜ್‌ಮೆಂಟ್, ಈವೆಂಟ್‌ ಮ್ಯಾನೇಜ್‌ಮೆಂಟ್ ಹಾಗೂ ಎಂಬಿಎ ನಂತಹ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವಾಗ ಇಂತಹ ಕಾರ್ಯಕ್ರಮದ ಅನುಭವಗಳು ಅತ್ಯಂತ ಉಪಯುಕ್ತವಾಗುತ್ತವೆ ಎಂದರು.

ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಪ್ರಾಂಶುಪಾಲರಾದ ಶ್ರೀ ಗಂಗಾಧರ್‌ ಈ. ಅವರು ಜೀವನವೇ ಒಂದು ಅಭಿರುಚಿ, ಸಂತೋಷದ ಜೀವನವನ್ನು ಸಾಗಿಸಲು ಅಭಿರುಚಿಗಳು ಮುಖ್ಯ.  ಯಾವ ಮನುಷ್ಯನಿಗೆ ಅಭಿರುಚಿಗಳು ಹೆಚ್ಚಿರುತ್ತವೊ, ಅಂಥವರ ಬದುಕು ಸುಖಮಯವಾಗಿರುತ್ತದೆ.  ಜಿಟಿ ಜಿಟಿ ಮಳೆಯಲ್ಲಿಯು ಕುಂದದ ಮಕ್ಕಳ ಉತ್ಸಹಕ್ಕೆ ಭೇಷ್‌ ಎಂದರು.

ತೀರ್ಪುಗಾರರಾಗಿ ಸರ್ಕಾರಿ ವಿಜ್ಞಾನ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀ ಸರ್ದಾರ್‌ ಹುಸೇನ್‌ ಹಾಗೂ ಯಶಸ್ವಿ ಯುವ ಉದ್ಯಮಿ ಕೆಫೆಬೈಟ್‌ನ್‌ ಮಾಲಿಕರಾದ ಶ್ರೀ ಮಹಾವೀರ್‌ ಭಾಗವಹಿಸಿದ್ದರು. ನಂತರ ಮಾತನಾಡಿದ ಶ್ರೀಯುತರು ತಮ್ಮ ಅನುಭವಗಳನ್ನು ಹಂಚಿಕೊಂಡು, ಮಕ್ಕಳ ಕ್ರೀಯಾಶೀಲತೆ ಹಾಗೂ ಸಂಘಟನಾತ್ಮಕ ಬೆಳವಣೆಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ರವಿ ಟಿ ಎಸ್‌.ಉಪಪ್ರಾಂಶುಪಾಲರಾದ ಶ್ರೀ ಅಣ್ಣಪ್ಪ ಹೆಚ್‌, ಸಂಚಾಲಕರಾದ ಶ್ರೀ ನಟರಾಜ್‌ ಎಂ. ವಿ., ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ಅನಿಲ್‌ರಾಜ್‌. ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!