ಬೆಂಗಳೂರು: ಪರೀಕ್ಷೆಯಲ್ಲಿ ಅಕ್ರಮದ ವಾಸನೆ ಬಂದ ಮೇಲೆ ಆರ್ ಡಿ ಪಾಟೀಲ್ ವಿಚಾರಣೆ ನಡೆಸಲಾಗಿತ್ತು. ಮನೆಯಲ್ಲಿ ಅಧಿಕಾರಿಗಳು ಇದ್ದಾಗಲೇ ತಪ್ಪಿಸಿಕೊಂಡಿದ್ದ ಆರ್ ಡಿ ಪಾಟೀಲ್, ಕೊನೆಗೂ ಪೊಲೀಸರ ಅತಿಥಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದು, ಸದ್ಯ ಕಲಬುರಗಿಗೆ ಪೊಲೀಸರು ಕರೆ ತರುತ್ತಿದ್ದಾರೆ.
ಪೊಲೀಸರ ಕೈಗೆ ಸಿಗದಂತೆ ಆರ್ ಡಿ ಪಾಟೀಲ್ ತಲೆ ಮರೆಸಿಕೊಂಡಿದ್ದ. ಜಾಮೀನಿಗಾಗಿ ಅಲ್ಲಿಂದಲೇ ಅರ್ಜಿಯನ್ನು ಹಾಕಿದ್ದ. ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ವಿಚಾರಣೆಯನ್ನು ಮುಂದಕ್ಕೆ ಹಾಕಿತ್ತು. ಆದರೆ ಇಂದೇ ಅರೆಸ್ಟ್ ಕೂಡ ಆಗಿದ್ದಾರೆ.
ತನ್ನ ಅಪಾರ್ಟ್ಮೆಂಟ್ ಮೂಲಕ ತಪ್ಪಿಸಿಕೊಂಡ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಆಗ ಬಿಜೆಪಿಗರು ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದರು. ಇದರ ಹಿಂದೆ ಶಾಸಕರಿ, ಸಚಿವರ ಕೈವಾಡವಿದೆ ಎಂದು ವಾಗ್ದಾಳಿ ನಡೆಸಿದ್ದರು. ಆ ಸಮಯದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಇನ್ನೆರಡು ದಿನದಲ್ಲಿ ಆತನ ಬಂಧನವಾಗುತ್ತೆ ಎಂದು ಭರವಸೆ ನೀಡಿದ್ದರು. ಆ ಮಾತಿನಂತೆ ಇದೀಗ ಆರ್ ಡಿ ಪಾಟೀಲ್ ಬಂಧನವಾಗಿದೆ.
ಅ. 29ರಂದು ಕೆ.ಇ.ಎ ವತಿಯಿಂದ ನಡೆಸಲಾಗಿದ್ದ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಲಬುರಗಿಯಲ್ಲಿ ಕೆಲವು ಅಭ್ಯರ್ಥಿಗಳು ಬ್ಲೂಟೂತ್ ಬಳಸಿ ಉತ್ತರಗಳನ್ನು ಬರೆಯತ್ತಾ ಕೊಠಡಿ ಪರಿವೀಕ್ಷಕರಿಗೆ ಸಿಕ್ಕಿಬಿದ್ದಿದು ಅದು ದೊಡ್ಡದೊಂದು ಜಾಲವನ್ನು ಅನಾವರಣಗೊಳಿಸಿತು. ಈ ಜಾಲದ ರೂವಾರಿ ಆರ್.ಡಿ. ಪಾಟೀಲ್ ಎಂಬುದು ತಿಳಿದುಬಂದಿತ್ತು. ಆತ 2021ರಲ್ಲಿ ಹೊರಬಿದ್ದಿದ್ದ ಪಿಎಸ್ಐ ಹಗರಣದ ಆರೋಪಿಯೂ ಕೂಡ ಆಗಿದ್ದು, ಕೆಲವು ತಿಂಗಳುಗಳಿಂದ ಜಾಮೀನಿನ ಮೇಲೆ ಹೊರಗಿದ್ದ.