ಶಿವಮೊಗ್ಗ: ಮಾಜಿ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದಾರೆ. ಬರೀ ಸಾಬರ ವಿಚಾರ, ಪ್ರತಿಮೆ ಬಗ್ಗೆ ಮಾತನಾಡಿದ್ದೇ ಆಯ್ತು. ಮನುಷ್ಯ ಜೀವನದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುವುದೇ ಇಲ್ಲ. ಅವರ ಆದ್ಯತೆಗಳೇ ಬೇರೆ ಇದೆ ಎಂದು ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ್ ಅವರು, ಮೊದಲು ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸಿಲಿ. ದೇಶ ಎಂದರೆ ಬರೀ ಮಣ್ಣಾ..? ಇಲ್ಲಿ ಜೀವಿಗಳಿಲ್ಲವಾ..? ಭೂಮಿ ಹಕ್ಕು ನೀಡುವ ಬಗ್ಗೆ ಮಾತನಾಡುವ ಬದಲು ಪ್ರತಿಮೆ, ಬಣ್ಣದ ಬಗ್ಗೆಯೇ ಮಾತನಾಡುತ್ತಾರೆ. ಇವತ್ತು ಬದುಕಿನ ಹೋರಾಟಗಳೇ ಬೇರೆ. ಆದ್ರೆ ಬಿಜೆಪಿ ಮಂಡಿಸುತ್ತಿರುವ ವಿಚಾರಗಳೇ ಬೇರೆಯಾಗಿದೆ. ಶರಾವತಿ ಸಂತ್ರಸ್ತರ ಸಮಸ್ಯೆ ಮನಲೆನಾಡಿನಾದ್ಯಂತ ಇದೆ. ಈ ಬಗ್ಗೆ ನಾನು ಹಲವು ಸಲ ಸಭೆ ನಡೆಸಿದ್ದೇನೆ.
ಬಿಜೆಪಿ ಸರ್ಕಾರ ಬಂದ ಮೇಲೆ ಸಂತ್ರಸ್ತರಿಗೆ ನೀಡುವ ಭೂಮಿ ಹಕ್ಕಿನ ಕಾನೂನನ್ನು ಸುಲಭ ಮಾಡಬೇಕಿತ್ತು. ಆದ್ರೆ ಇನ್ನಷ್ಟು ಕಠಿಣ ಮಾಡಿಟ್ಟಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವಂತ ಆಸ್ತಿಯೆಲ್ಲಾ ಬಿಜೆಪಿ ಮುಖಂಡರದ್ದೇ ಆಗಿರುತ್ತದೆ. ವರಾಹಿ ಹಿನ್ನೀರಿನ ಪ್ರದೇಶದ ಜನರಿಗೆ ಮೀಸಲಿಟ್ಟ ಜಮೀನು ಕೂಡ ಈಗ ಬಿಜೆಪಿ ಮುಖಂಡರ ಸ್ವಾಧೀನದಲ್ಲಿದೆ. ಇದನ್ನು ಬಿಜೆಪಿ ಗಮನಹರಿಸಬೇಕು ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.