ಮಂಗಳೂರು: ಮೃತ ಪ್ರವೀಣ್ ಬೆಟ್ಟಾರು ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ವಿಶ್ವನಾಶವಾಗಿ ಹೋಗುತ್ತರ. ಹತ್ಯೆಗಳು ಚುನಾವಣಾ ವೋಟ್ ಬ್ಯಾಂಕ್ ಆಗಿದೆ. ಅಣ್ಣಪ್ಪನ ಶಾಪ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು, ಹತ್ಯೆ ಈಗ ಮಾಮೂಲಿಯಾಗಿದೆ. ಚುನಾವಣೆಗೆ ಎಂಟು ತಿಂಗಳು ಬಾಕಿ ಇದೆ. ವೋಟ್ ಹಾಕಬೇಕಲ್ಲ ಅದಕ್ಕೆಂದೆ ಕೊಲೆಗಳು ಆಗುತ್ತವೆ. ಇದುವೇ ಕರಾವಳಿಯ ವೋಟ್ ಬ್ಯಾಂಕ್. ನಮ್ಮನ್ನು ಒಡೆದು ಹಾಳು ಮಾಡಿ ರಾಜಕೀಯ ಮಾಡ್ತಾರೆ. ಈ ಕೊಲೆಯಿಂದಾಗಿ ರಾಜಕೀಯದಚರ ನಾಟಕ ಬಯಲಾಯ್ತು. ಯುವಕರು ಈ ಹೋರಾಟ ನಿಲ್ಲಿಸಬೇಡಿ. ರಾಜಕಾರಣಿಗಳಿಗೆ ಚಪ್ಪಲಿಯಲ್ಲಿ ಹೊಡೆಯಿರಿ.
ಹಿಜಾಬ್ ಪ್ರಾರಂಭದಲ್ಲಿಯೇ ಹೇಳಿದ್ದೆ ಕೊಲೆಯಾಗುತ್ತೆ ಅಂತ. ಹರ್ಷನ ಕೊಲೆಯಾಯ್ತು. ಆರೋಪಿಗಳು ಬಿರಿಯಾನಿ ತಿಂತಿದ್ದಾರೆ. ಹರ್ಷನ ಮನೆ ಹೆಣ್ಣು ಮಕ್ಕಳು ಮಿನಿಸ್ಟರ್ ಹತ್ರ ಹೋದ್ರೆ ಹೊರಗೆ ಹಾಕ್ತಾರೆ. ಅಮಾಯಕರು ಬಲಿಯಾಗ್ತಿದ್ದಾರೆ. ರಾಜ್ಯ ಸರ್ಕಾರ ಸತ್ತು ಹೋಗಿದೆ. ಇದು ಚೌ ಚೌ ಸರ್ಕಾರ. ಸೌಜನ್ಯ ಹತ್ಯೆ ಕೇಸನ್ನು ಬಿಜೆಪಿ ಮುಚ್ಚಿ ಹಾಕಿದೆ. ಸೌಜನ್ಯಾಗೂ ನ್ಯಾಯ ಸಿಗಲಿಲ್ಲ. ಯಾರ ಬಳಿ ಕೇಳಬೇಕು. ಹಿಂದೂ ರಾಷ್ಟ್ರ ಕಟ್ಟಲು ಹೊರಟ ಬಿಜೆಪಿ ಮುತಾಲಿಕ್ ರನ್ನು ಬ್ಯಾನ್ ಮಾಡ್ತಾರೆ. ಆದರೆ ಭಯೋತ್ಪಾದಕರು ರಾಜ್ಯಾದ್ಯಙತ ತಿರುಗಾಡುತ್ತಾರೆ. ಮುತಾಲಿಕ್ ನನ್ನು ಬಂಧಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.