ಮಠಾಧೀಶರಿಂದಲೂ ಶುರುವಾಯ್ತು RCB ಗೆ ಸಪೋರ್ಟ್

ಗೆಲ್ಲಲಿ ಸೋಲಲಿ ನಾವೂ ಯಾವುತ್ತು ಆರ್ಸಿಬಿ ಫ್ಯಾನ್ಸ್ ಎಂದು ಹೇಳುವವರ ಸಂಖ್ಯೆ ಕಡಿಮೆ ಏನು ಇಲ್ಲ. ಇಷ್ಟು ದಿನ ಕ್ರಿಕೆಟ್ ಅಭಿಮಾನಿಗಳು ಆರ್ ಸಿ ಬಿ ಗೆಲ್ಲಲಿ ಎಂದು ಆಶಿಸುತ್ತಿದ್ದರು. ಆದರೆ ಇದೀಗ ಮಠಾಧೀಶರ ಬೆಂಬಲವೂ ಸಿಕ್ಕಿದೆ. ಇದರಿಂದ ಈ ಬಾರಿ ಕಪ್ ನಮ್ಮದೆ ಎನ್ನುತ್ತಿದ್ದಾರೆ.

ಅದರಲ್ಲೂ ಆರ್ಸಿಬಿ ತನ್ನ ಫ್ಲೇ ಆಫ್ ಕನಸನ್ನು ಕಾಪಾಡಿಕೊಂಡು ಬಂದಿದೆ. ಆರ್ಸಿಬಿ ಕನಸಿಗೆ ಮುಂಬೈ ಕೂಡ ಸಾಥ್ ನೀಡಿದೆ. ಈ ಹಿನ್ನೆಲೆ ಆರ್ ಸಿ ಬಿ ಟೀಂಗೆ ಮಠಾಧೀಶರ ಆಶೀರ್ವಾದ ಸಿಕ್ಕಿದೆ. ರಾಯಚೂರಿನ ಸ್ವಾಮೀಜಿಗಳು ಆರ್ ಸಿ ಬಿ ಮೇಲಿರುವ ಕಿಲ್ಲೇರಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿಗಳು ಕ್ರಿಕೆಟ್ ಮೇಲಿನ ಅದರಲ್ಲೂ ಆರ್ ಸಿ ಬಿ ಮೇಲಿನ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಈ ಸಲ ಕಪ್ ನಮ್ಮದೇ ಈ ಸಲ ಕಪ್ ನಮ್ಮದೇ ಎನ್ನುತ್ತಾ ಆರ್ಸಿಬಿಯನ್ನು ಹುರಿದುಂಬಿಸುತ್ತೀರಿ. ಅದಕ್ಕೆ ಈ ಬಾರಿ ಆ ಟೀಂ ಫ್ಲೇ ಆಫ್ ಗೆ ತಲುಪಿದೆ. ಟೀಂನ ಪ್ರತಿಯೊಬ್ಬ ನಾಯಕನನ್ನು ನೀವೂ ಪ್ರೋಒತ್ಸಾಹಿಸುತ್ತೀರಿ. ಬೆಂಗಳೂರಿನ ತಂಡ ಸೋಲಲಿ, ಗೆಲ್ಲಲೀ ನೀವೂ ಅದನ್ನು ಹುರಿದುಂಬಿಸುತ್ತೀರಿ. ಕ್ರಿಕೆಟ್ ಮೇಲಿರುವ ಪ್ರೀತಿ,ವ್ಯಾಮೋಹವನ್ನು ನಾಟಕಗಳ ಮೇಲೂ ತೋರಿಸಿ ಎಂದು ರಾಯಚೂರಿನ ನಾಟಕವೊಂದರ ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *