ದೇಹದ ಮೇಲೆಲ್ಲಾ ಖರ್ಗೆಯ ಸಾಧನೆಯದ್ದೇ ಟ್ಯಾಟೂ : ಅಭಿಮಾನ ಮನಸ್ಸಲ್ಲಲ್ಲಾ ಮೈಮೇಲಿದೆ..!

suddionenews
1 Min Read

ಸಿನಿಮಾ ಸೆಲೆಬ್ರೆಟಿಗಳಿಗೆ, ಕ್ರಿಕೆಟರ್ಸ್ ಗಳಿಗೆ ಅಭಿಮಾನಿಗಳಿರುವುದು ಸಹಜ. ರಾಜಕಾರಣಿಗಳು ಅಭಿಮಾನಿಗಳಿರುತ್ತಾರೆ‌. ಅವರ ಸಿದ್ಧಾಂತಗಳನ್ನು ಬೆಂಬಲಿಸುತ್ತಾರೆ. ಆದರೆ ಇಲ್ಲೊಬ್ಬ ಅಭಿಮಾನಿ ತನ್ನ ದೇಹದ ಮೇಲೆಲ್ಲಾ ಖರ್ಗೆ ಅವರ ಸಾಧನೆಯನ್ನೇ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದನ್ನು ಕಂಡ ಖರ್ಗೆ ಫ್ಯಾಮಿಲಿ ಶಾಕ್ ಆಗುವುದರ ಜೊತೆಗೆ ಆತನ ಅಭಿಮಾನಕ್ಕೆ ಮನಸೋತಿದೆ.

ಹಣಮಂತಪ್ಪ ಹೊಸಮನಿ ಎಂಬುವವರು ಈ ರೀತಿ ಟ್ಯಾಟೂ ಹಾಕಿಸಿಕೊಂಡಿರುವವರು. ಇವರು ಪ್ರಿಯಾಂಕ್ ಖರ್ಗೆ ಅವರ ಅಭಿಮಾನಿಯಾಗಿದ್ದಾರೆ. ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾಧನೆಯ ಬಗ್ಗೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ‌ ಖರ್ಗೆ ಎಂದು ಬುರುಡೆಯಲ್ಲಿ ಬರೆದುಕೊಂಡಿದ್ದಾರೆ.

ಎದೆಯ ಮೇಲೆ ಡಾ. ಖರ್ಗೆ, ಪ್ರಿಯಾಂಕ್‌ ಭಾವಚಿತ್ರ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ತಲೆಯ ಮೇಲೆ ಪಿಕೆ ಬಾಸ್‌ ಎಂದು ಕೇಶ ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಬೆನ್ನ ಮೇಲೆಲ್ಲಾ ಡಾ.ಮಲ್ಲಿಕಾರ್ಜುನ ಖರ್ಗೆಯವರು ರಾಜಕೀಯವಾಗಿ 5 ದಶಕಗಳ ಕಾಲ ನಡೆದು ಬಂದ ದಾರಿಯ ಮಾಹಿತಿಯನ್ನು ಟ್ಯಾಟೂ ಮೂಲಕ ಬರೆದುಕೊಂಡಿದ್ದಾರೆ.

 

ಮುತ್ಸದ್ದಿ ನಾಯಕ, ಕಲ್ಯಾಣ ಕರ್ನಾಟಕದ ಕಲ್ಯಾಣದ ಹರಿಹಾರ, ಎಐಸಿಸಿ ಅಧ್ಯಕ್ಷರಾದ ಶ್ರೀ @kharge ಅವರು ತಮ್ಮ ಸಾಧನೆ, ಜನಪರ ಕೆಲಸಗಳಿಂದಲೇ ಮೇರು ನಾಯಕರಾಗಿ ಬೆಳೆದು ನಿಂತಿದ್ದಾರೆ.

ಶೋಷಿತರ ದನಿಯಾಗಿ, ಶಕ್ತಿಯಾಗಿ, ಕಾಂಗ್ರೆಸ್ ಪಕ್ಷದ ಸಾರಥಿಯಾಗಿರುವ ಖರ್ಗೆಯವರ ಅಭಿಮಾನಿಯೊಬ್ಬರು ಅವರ ಸಾಧನೆಗಳ ಪಟ್ಟಿಯನ್ನೇ ಮೈಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇವರ ಅಭಿಮಾನಕ್ಕೆ ಶರಣು ಎಂದು ಕಾಂಗ್ರೆಸ್ ಟ್ವೀಟ್ ಕೂಡ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *