ರಾಜಸ್ತಾನದಲ್ಲೂ ಸಮಸ್ಯೆ ಬಗೆಹರಿಸಿದ ಖರ್ಗೆ..!

ಕರ್ನಾಟಕದಲ್ಲಿ ಭರ್ಜರಿ ಮತ ಗಳಿಸಿ ಸರ್ಕಾರ ರಚನೆ ಮಾಡಿದ ಕಾಂಗ್ರೆಸ್ ಈಗ ಬೇರೆ ಬೇರೆ ರಾಜ್ಯದಲ್ಲೂ ಅಧಿಕಾರಕ್ಕೆ ಬರುವುದಕ್ಕೆ ಪ್ಲ್ಯಾನ್ ನಡೆಸಿದೆ. ಅದರ ಭಾಗವಾಗಿ ಮುಂಬರುವ ರಾಜಸ್ಥಾನವನ್ನು ಟಾರ್ಗೆಟ್ ಮಾಡಿಕೊಂಡಿದೆ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನ ವಹಿಸಿ ಕೊಂಡ ಮೇಲೆ ಹಿಮಾಚಲ ಪ್ರದೇಶ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈ ಹಿನ್ನಲೆ ಬೇರೆ ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ತರುವ ಸವಾಲು ಎದುರಾಗಿದೆ.

ಎಲ್ಲಾ ರಾಜ್ಯದಲ್ಲೂ ನಾಯಕರ ನಡುವೆ ಮನಸ್ತಾಪ ಅನ್ನೋದು ಇದ್ದೆ ಇರುತ್ತದೆ. ನಿರೀಕ್ಷೆಗಳು ಇರುವ ಕಾರಣಕ್ಕಾಗಿಯೇ ಭಿನ್ನಾಭಿಪ್ರಾಯಗಳು ಹೊಗೆಯಾಡುವುದಕ್ಕೆ ಶುರು ಮಾಡುತ್ತೆ. ಈ ಭಿನ್ನಾಭಿಪ್ರಾಯ ಹೋಗಲಾಡಿಸಲು ಮಲ್ಲಿಕಾರ್ಜುನ ಖರ್ಗೆ ಮುಂದಾಗಿದ್ದಾರೆ. ರಾಜಸ್ಥಾನದಲ್ಲಿ ಬಂಡಾಯ ಶಮನ ಮಾಡುವಲ್ಲಿ ಮಲ್ಲಿಕಾರ್ಜುನ ಖರ್ಗೆ ಸಕ್ಸಸ್ ಆಗಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋಟ್‌ ಹಾಗೂ ರಾಜಸ್ಥಾನ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಸಚಿನ್ ಪೈಲಟ್‌ ನಡುವಿನ ಸುದೀರ್ಘ ಕಾಲದ ಅಸಮಾಧಾನವನ್ನು ಕಾಂಗ್ರೆಸ್‌ ಹೈಕಮಾಂಡ್‌ ಸೋಮವಾರ ಶಮನಗೊಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *