ಅಭಿವೃದ್ಧಿ ನಷ್ಟದ ವಿವರಣೆ ನೀಡಿ ಬಿಜೆಪಿ ವಿರುದ್ಧ ಹರಿಹಾಯ್ದ ಪ್ರಿಯಾಂಕ್ ಖರ್ಗೆ

2 Min Read

ಬೆಂಗಳೂರು: ಬಿಜೆಪಿ ಸರ್ಕಾರದ ಮೇಲೆ ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದು, ಎಕನಾಮಿಕ್ಸ್ ಸರ್ವೆ ವರದಿಯನ್ನ ಮಾಡುತ್ತೆ. ವಿಶ್ವದ ೧೭೩ ನಗರಗಳನ್ನ ಅಧ್ಯಯನ ಮಾಡಿದೆ. ನಮ್ಮ ದೇಶದಿಂದ ೫ ನಗರ ಮಾತ್ರ ಆಯ್ಕೆಯಾಗಿವೆ. ಇದನ್ನ ನೋಡಿದರೆ ಅಭಿವೃದ್ಧಿ ಗೊತ್ತಾಗುತ್ತದೆ. ನಮ್ಮ ದೇಶದ ಐದರಲ್ಲಿ ಬೆಂಗಳೂರು ಕೊನೆಯಲ್ಲಿದೆ. ಬೆಂಗಳೂರು ಸಿಲಿಕಾನ್ ಸಿಟಿಯಾಗಿತ್ತು. ಗಾರ್ಬೇಜ್ ಜೊತೆಗೆ ಇವತ್ತು ಗಾಂಜಾ ಕೂಡ ಸಿಗ್ತಿದೆ. ಕಲ್ಚರಲ್ ಸಿಟಿ ಇವತ್ತು ಕ್ರೈಂ ಸಿಟಿಯಾಗಿದೆ. ಕಮ್ಯೂನಲ್ ಸಿಟಿಯಾಗಿ ಮಾರ್ಪಾಡಾಗಿದೆ. ಇದು ಬೆಂಗಳೂರಿಗೆ ಸರ್ಕಾರದ ಕೊಡುಗೆಯಾಗಿದೆ.‌ ಕಳೆದ ೩ ವರ್ಷಗಳಲ್ಲಿ ಸರ್ಕಾರ ಕೊಟ್ಟಿರುವ ಕೊಡುಗೆ ಇದು ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಬಂಡವಾಳ ಬರೋದಿಲ್ಲ ಅಂದ್ರೆ ಉದ್ಯೋಗ ಎಲ್ಲಿಂದ ಬರುತ್ತೆ. ತೆರಿಗೆ ಬರಲಿಲ್ಲ ಅಂದ್ರೆ ಬ್ರಾಂಡ್ ಬೆಂಗಳೂರು ಎಲ್ಲಿಯಾಗುತ್ತೆ. ಇವತ್ತು ಬೇರೆ ಬೇರೆ ರಾಜ್ಯ ಕರೆಯುತ್ತಿದ್ದಾರೆ. ಕೆಟಿಎಆರ್ ನಮ್ಮ ಕಡೆ ಬನ್ನಿ ಅಂತ ಕರೆಯುತ್ತಿದ್ದಾರೆ. ಉದ್ಯಮಿಗಳನ್ನ ಬಂಡವಾಳ ಹೂಡಿ ಅಂತಿದ್ದಾರೆ. ಚೆನ್ನೈ ಸಚಿವ ತ್ಯಾಗರಾಜನ್ ಆಹ್ವಾನಿಸ್ತಿದ್ದಾರೆ. ತಮಿಳುನಾಡಿಗೆ ಬನ್ನಿ ಎಲ್ಲ ಕೊಡ್ತೇವೆ ಅಂತಾರೆ. ನಮ್ಮ ರಾಜ್ಯದಲ್ಲಿ ಉದ್ಯಮಿಗಳು‌ ಬರ್ತಿಲ್ಲ. ಕಿರಣ್ ಮಂಜುಂಮ್ದಾರ್ ಕೂಡ ಹೇಳ್ತಾರೆ. ಮೂಲಸೌಕರ್ಯ ಸರಿಯಿಲ್ಲ ಅಂತ ಹೇಳಿದ್ದಾರೆ.

ಅವರೇನು ರಾಜಕಾರಣಿಗಳೇ. ಅವರು ಬೆಂಗಳೂರಿನ ಉತ್ತಮ ರಾಯಭಾರಿ. ಅವರೇ ಧ್ವನಿಯನ್ನ ಎತ್ತಿದ್ರು ಸರ್ಕಾರ ಗಮನಹರಿಸಿಲ್ಲ. ಬೆಂಗಳೂರಿನಲ್ಲಿ ಮೂಲಸೌಕರ್ಯಗಳೇ ಕುಸಿದಿವೆ. ಇದಕ್ಕೆಲ್ಲ ಕಾರಣ ಮೂರು ವರ್ಷದ ಬಿಜೆಪಿ‌ ಸರ್ಕಾರ ಕಾರಣ.

ಪ್ರಧಾನಿ ಬಂದಾಗ ರಸ್ತೆಯೇ ಕುಸಿದು‌ ಹೋಯ್ತು. ಡಾಂಬರ್ ಒಂದೇ ದಿನಕ್ಕೆ ಕಿತ್ತು ಹೋಯ್ತು. ಈಗ ೪೦% ಅಲ್ಲ ೪೦% ಕೇಂದ್ರಕ್ಕೆ‌ ಹೋಗಲಿದೆ. ೪೦% ಇಲ್ಲಿಗೆ ಬರಲಿದೆ,೨೦% ಮಾತ್ರ ಕೆಲಸ ಆಗಲಿದೆ. ಪಾಟ್ ಹೋಲ್ ಡೆತ್ ಕಾನ್ಸೆಫ್ಟ್ ಎಲ್ಲಿತ್ತು. ಇವತ್ತು ಬೆಂಗಳೂರಿನಲ್ಲಿ ಗುಂಡಿಗೆ ಡೆತ್ ಆಗ್ತಿವೆ. ನಮ್ಮ ಲಾಭವನ್ನ ದೆಹಲಿ, ಮುಂಬೈ, ಚೆನ್ನೈ ಪಡೆಯುತ್ತಿವೆ. ದೆಹಲಿಯಲ್ಲಿ ೫೦೦೦ ಸ್ಟಾರ್ಟ್ ಆಪ್ಸ್ ಪ್ರಾರಂಭವಾಗಿವೆ. ಬೆಂಗಳೂರಿನಲ್ಲಿ ಕೇವಲ ೪೫೦೦ ಸ್ಟಾರ್ಟ್ ಅಪ್ ಮಾಡಲಾಗಿದೆ. ಎಲ್ಲಿಯ ಐಟಿ ಹಬ್ ಎಲ್ಲಿಗೆ ಹೋಗ್ತಿದೆ

 

ವಾಕ್ ಸ್ವಾತಂತ್ರ್ಯ ಅನ್ ಕಂಫರ್ಟಬಲ್ ಆಗಿದೆ. ಶಿಕ್ಷಣ, ವಸತಿ ವ್ಯವಸ್ಥೆ ಸರಿಯಿಲ್ಲ. ಇಂಧನ, ವಾಟರ್ ವ್ಯವಸ್ಥೆ ಸರಿಯಿಲ್ಲ. ಆದರೆ ಕಮ್ಯೂನಿಕೇಶನ್ ಮಾತ್ರ ಸರಿಯಿದೆ ಎಂದಿದೆ. ಇದನ್ನ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ. ಒಲಾ ಕಂಪನಿ ಬೆಂಗಳೂರಿನದ್ದು. ಇವತ್ತು ಕಂಪನಿ‌ ಬೆಂಗಳೂರು ತೊರೆದಿದೆ. ಚೆನ್ನೈನ ಹೊಸೂರಿಗೆ ಹೋಗಿದೆ. ೧೦ ಸಾವಿರ ಮಂದಿ ಅಲ್ಲಿ ಕೆಲಸ ಮಾಡ್ತಿದ್ದಾರೆ. ಬೆಂಗಳೂರಿನ ಕಂಪನಿ ಚೆನ್ನೈ ಪಾಲಾಗಿದೆ. ದಾವೋಸ್ ಪ್ರವಾಸದಲ್ಲಿ ಫೋಟೋ ಹಾಕ್ತಿದ್ರಲ್ಲ. ಸಿಎಂ,ನಿರಾಣಿಯವರು ಹಾಕ್ತಿದ್ರು. ಎಲ್ಲಿ ಉದ್ಯಮಗಳು‌ಮರೆಯಾಗ್ತಿವೆ,ಏನ್ ಮಾಡ್ತಿದ್ದೀರ. ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ನೂಪುರ್ ಶರ್ಮಾ ಎಷ್ಟು ಡ್ಯಾಮೇಜ್ ಮಾಡಿದ್ದಾರೆ. ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಆಗಿದ್ರೂ ಸರ್ಕಾರ ಎಚ್ಚೆತ್ತುಕೊಳ್ತಿಲ್ಲ. ಮೋದಿ ಕರೆಸಿ ಸಬರ್ ಬನ್ ಯೋಜನೆ ಪ್ರಚಾರ ಗಿಟ್ಟಿಸಿಕೊಂಡ್ರು. ಪಿಎಂಗೆ ಇವರು ಇಷ್ಟು ಸುಳ್ಳು ಹೇಳ್ತಾರೆ. ಇನ್ನ ರಾಜ್ಯದ ಜನರಿಗೆ ಇನ್ನೆಷ್ಟು ಸುಳ್ಳು ಹೇಳಬಹುದು ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *