ಚಿತ್ರದುರ್ಗ : ಹೊಸದುರ್ಗದ ಕಾಂಗ್ರೆಸ್ ಮುಖಂಡ ಖಲೀಲುಲ್ ರೆಹ್ಮಾನ್ ಅವರನ್ನು ಕೆಪಿಸಿಸಿ ರಾಜ್ಯ ಮೈನಾರಿಟಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ರಾಜ್ಯಸಭಾ ಸದಸ್ಯರು ಡಾ. ನಾಸಿರ್ ಹುಸೈನ್ ರವರ ಶಿಫಾರಸ್ಸಿನ ಮೇರೆಗೆ ಮತ್ತು ಎ.ಐ.ಸಿ.ಸಿ ಮೈನಾರಿಟಿ ಅಧ್ಯಕ್ಷರು ಇಮ್ರಾನ್ ಪ್ರತಾಪಗಡಿ ರವರ ಅನುಮೋದನೆ ಪಡೆದು ರಾಜ್ಯಾಧ್ಯಕ್ಷರಾದ ಅಬ್ದುಲ್ ಜಬ್ಬಾರ್ ರವರು ಈ ಆದೇಶ ಹೊರಡಿಸಿದ್ದಾರೆ.
ರೆಹ್ಮಾನ್ ಅವರ ತಂದೆ ದಿವಂಗತ ಸಾದಿಕುಲ್ಲಾ ದಿವಂಗತ ಸಿ.ಕೆ. ಜಾಫರ್ ಶರೀಫರ ಸೋದರಳಿಯರಾಗಿದ್ದು, ಚಿತ್ರದುರ್ಗ ಜಿಲ್ಲೆಯ ವಕ್ಫ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.