ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿಯೇ ಇಂದು ಕೆಜಿಎಫ್ ಬಾಬು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜೋರು ಗಲಾಟೆ ನಡೆದಿದೆ. ಈ ವೇಳೆ ಕೆಜಿಎಫ್ ಬಾಬು ಆಕ್ರೋಶ ಹೊರ ಹಾಕಿದ್ದಾರೆ. ಗಲಾಟೆ ವಿಚಾರ ತಿಳಿದ ಬಳಿಕ ರಾಜ್ಯದ ಉಸ್ತುವಾರಿ ರಣದೀಪ್ ಸುರ್ಜೆವಾಲ್ ಪ್ರತಿಕ್ರಿಯೆ ನೀಡಿ, ಪಕ್ಷದ ಕಚೇರಿಯಲ್ಲಿ ನಿಂತು ಪಕ್ಷಕ್ಕೆ ಚ್ಯುತಿ ಬರುವಂತೆ ವರ್ತಿಸಿದ್ದಾರೆ. ಅವರನ್ನು ಕೂಡಲೇ ವಜಾ ಮಾಡಬೇಕೆಂದು ಆದೇಶಿಸಿದ್ದಾರೆ.
ಈ ಆದೇಶಕ್ಕೆ ಕೆಜಿಎಫ್ ಬಾಬು ಪ್ರತಿಕ್ರಿಯೆ ನೀಡಿದ್ದು, ನಾನು ರಾಜ್ಯದಲ್ಲಿ ಕಾಂಗ್ರೆಸ್ ಬರಬೇಕು ಅಂತ ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ನನ್ನನ್ನು ಒಳಗೆ ಬಿಡದಂತೆ ಹೇಳಿದ್ದರು. ಸಲೀಂ ಅಹ್ಮದ್ ಕೈನಲ್ಲಿ ಏನು ಆಗುತ್ತೆ..? ಅವರ ಹಿಂದೆ ನಾಲ್ಕು ಜನ ಇಲ್ಲ. ಸಲೀಂ ಅಹ್ಮದ್ ಅವನು ಯಾರು..? ಮುಸಲ್ಮಾನು ಅಲ್ಲ, ಅವನಿಗೆ ಯಾರು ವೋಟು ಕೊಡಲ್ಲ. ನಾನು ಪಕ್ಷದಿಂದ ಅಲ್ಲ, ಪಕ್ಷ ನನ್ನಿಂದ ಇರೋದು. ನೀವೇನ್ ತೆಗೆಯೋದು, ನಾನೇ ಬಿಡ್ತೇನೆ ಎಂದಿದ್ದಾರೆ.
ನಾನು ಚಿಕ್ಕಪೇಟೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಪ್ರತಿ ಮನೆಗೆ ಮನೆ, ಮನೆಗೆ ಐದು ಸಾವಿರ ಖರ್ಚು ಮಾಡಿದ್ದೇನೆ. ಇದಕ್ಕಾಗಿ 30 ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ. ನಾನು ಮೂರು ಸಾವಿರ ಮನೆ ಕಟ್ಟಿಕೊಟ್ಟಿದ್ದೇನೆ. 180 ಕೋಟಿ ಹಣ ಖರ್ಚು ಮಾಡಿದ್ದೇನೆ. ಇದನ್ನ ಯಾರೂ ಧೈರ್ಯವಾಗಿ ಹೇಳುವುದಿಲ್ಲ. ಬಡವರು ಬಡವರಾಗಿಯೇ ಇರಬೇಕಾ..? ಎಂದು ಪ್ರಶ್ನಿಸಿದ್ದಾರೆ.