Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೇತುಗ್ರಸ್ತಚಂದ್ರಗ್ರಹಣ : ರಾಯರ ಮಠದಲ್ಲಿ ಯಾವುದೇ ನಿರ್ಬಂಧವಿಲ್ಲ

---Advertisement---

ರಾಯಚೂರು: ಇಂದು ಕೇತುಗ್ರಸ್ತ ಚಂದ್ರಗ್ರಹಣ ಇದೆ. ಎಲ್ಲಾ ದೇವಸ್ಥಾನಗಳಲ್ಲೂ ದೇವಾಲಯದ ಬಾಗಿಲನ್ನ ಬಂದ್ ಮಾಡಲಾಗಿದೆ. ಗ್ರಹಣ ಮುಗಿದ ಮೇಲೆ ದೇವಾಲಯಗಳನ್ನ ಸ್ವಚ್ಛಗೊಳಿಸಿ, ವಿಶೇಷ ಪೂಜೆಯನ್ನ ಸಲ್ಲಿಸುತ್ತಾರೆ. ಗ್ರಹಣ ಮುಗಿಯಿವ ತನಕ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಯಾವುದೇ ರೀತಿಯ ಅನುಮತಿ ಇರುವುದಿಲ್ಲ. ಆದರೆ ರಾಯರ ಮಠದಲ್ಲಿ ಭಕ್ತಾಧಿಗಳಿಗೆ ಈ ರೀತಿಯ ಯಾವುದೇ ನಿರ್ಬಂಧವನ್ನು ಮಾಡಿಲ್ಲ.

ರಾಯರ ದರ್ಶನಕ್ಕಾಗಿ ಪ್ರತಿ ದಿನ ಕೂಡ ಭಕ್ತಾಧಿಗಳು ಹೋಗುತ್ತಾರೆ. ದೂರದೂರಿನಿಂದ ಕೂಡ ಬರುತ್ತಾರೆ. ರಾಯರ ದರ್ಶನ ಸಿಗದೆ ಹೋದರೆ ಭಕ್ತಾಧಿಗಳಿಗೂ ಬೇಸರ. ಹೀಗಾಗಿ ಗ್ರಹಣದ ಸಮಯದಲ್ಲೂ ಯಾವುದೇ ನಿರ್ಬಂಧವನ್ನು ಏರಿಲ್ಲ. ಎಂದಿನಿಂತೆ ರಾಯರ ಬೇಂದಾವನ ದರ್ಶನವನ್ನ ಮಾಡಬಹುದಾಗಿದೆ. ಆದರೆ ತೀರ್ಥ ಪ್ರಸಾದ, ‌ಮಂತ್ರಾಕ್ಷತೆ, ಪ್ರಸಾದ ವಿನಿಯೋಗದ ವ್ಯವಸ್ಥೆ ಇರುವುದಿಲ್ಲ. ಉಳಿದಂತೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಮುಖ್ಯ ದ್ವಾರವನ್ನು ಎಂದಿನಂತೆಯೇ ತೆರೆದಿದೆ.

 

ಇಂದು ಗ್ರಹಣ ಹಾಗೂ ಹೋಳಿ ಹುಣ್ಣಿಮೆ ಇರುವ ಕಾರಣ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿಯೇ ಮಠಕ್ಕೆ ಭೇಟಿ ನೀಡಿದ್ದಾರೆ. ರಾಯರ ಬೃಂದಾವನಕ್ಕೆ ಇಂದು ರಾಯರಿಗೆ ಜಲಾಭಿಷೇಕವನ್ನ ಮಾಡಲಾಗಿದೆ. ಪ್ರಸಾದ ವಿನಿಯೋಗ, ತೀರ್ಥ, ಅಕ್ಷತೆಯನ್ನು ಬಂದ್ ಮಾಡಲಾಗಿದೆ. ಗ್ರಹಣ ಬಿಡುವ ಸಮಯಕ್ಕೆ ಇದೆಲ್ಲವನ್ನು ಮತ್ತೆ ಆರಂಭಿಸಲಾಗುತ್ತದೆ. ಉಳಿದಂತೆ ರಾಯರ ದರ್ಶನ ಮಾತ್ರ ಇರಲಿದೆ.

ಇಂದು ಗ್ರಹಣ ಇರುವ ಕಾರಣ, ಶ್ರೀಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ನಿಮಿಷಾಂಭ ದೇವಾಲಯ, ರಂಗನಾಥಸ್ವಾಮಿ ದೇವಾಲಯ, ಅನ್ನಪೂರ್ಣೇಶ್ವರಿ ದೇಗುಲ, ಘಾಟಿ ಸುಬ್ರಮಣ್ಯ, ತಲಕಾವೇರಿ ದೇವಾಲಯ, ಮಡಿಕೇರಿಯ ಭಗಂಡೇಶ್ವರಿ ದೇವಾಲಯ, ಕೊಪ್ಪಳದ ಹುಲಿಗೆಮ್ಮ ದೇವಾಲಯ, ಅಂಜನಾದ್ರಿ ದೇವಾಲಯ, ಹಂಪಿಯ ವಿರುಪಾಕ್ಷ ದೇವಾಲಯಗಳನ್ನ ಬಂದ್ ಮಾಡಲಾಗಿದೆ. ರಾತ್ರಿ 7ರ ನಂತರ ಗ್ರಹಣ ಮುಗಿದ ಮೇಲೆ ದೇವಾಲಯಗಳ ಬಾಗಿಲನ್ನ ತೆರೆಯಲಾಗುತ್ತದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now