Kerala: Man Sentenced to 142 Years in Jail and Fined Rs 5 Lakh for Sexually Assaulting Minor Girl For Two Years
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ : ವ್ಯಕ್ತಿಗೆ 142 ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿ ದಂಡ…!
ಕೇರಳದ ಪತ್ತನಂತಿಟ್ಟದ ಪೋಕ್ಸೋ ನ್ಯಾಯಾಲಯವು 10 ವರ್ಷದ ಮಗುವಿನ ಮೇಲೆ ಎರಡು ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ 41 ವರ್ಷದ ವ್ಯಕ್ತಿಗೆ 142 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ (ಆರ್ಐ) ಮತ್ತು 5 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ನ್ಯಾಯಾಲಯವು ವ್ಯಕ್ತಿಗೆ ಈ ಶಿಕ್ಷೆಯನ್ನು ನೀಡಿದೆ. ಮತ್ತು ಆರೋಪಿಯು ದಂಡವನ್ನು ಪಾವತಿಸದಿದ್ದರೆ, ಹೆಚ್ಚುವರಿಯಾಗಿ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿದೆ. ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ನೀಡಲಾದ ಗರಿಷ್ಠ ಶಿಕ್ಷೆಯ ಅವಧಿ ಇದಾಗಿದೆ.
ಆನಂದನ್ ಪಿಆರ್ ಅಲಿಯಾಸ್ ಬಾಬು ಶಿಕ್ಷೆಗೆ ಗುರಿಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. 2019 ಮತ್ತು 2021 ರ ನಡುವೆ 10 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಮತ್ತು ಆ ಎರಡು ವರ್ಷಗಳ ಅವಧಿಯಲ್ಲಿ ಆಕೆಯ ಮೇಲೆ ಅಮಾನುಷ ರೀತಿಯಲ್ಲಿ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ತಿರುವಲ್ಲಾ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಬಾಬು ಸಂಬಂಧಿಕರಾಗಿದ್ದು, ಮಗುವಿನ ಪೋಷಕರೊಂದಿಗೆ ಅದೇ ನಿವಾಸದಲ್ಲಿ ಇರುತ್ತಿದ್ದ ಎಂಬುದಾಗಿ ತಿಳಿದು ಬಂದಿದೆ.