ತಿರುವನಂತಪುರಂ: ನಿಮ್ಗೆಲ್ಲಾ ಗೊತ್ತಿದೆ ಅನ್ಸುತ್ತೆ. ಯಾಕಂದ್ರೆ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಂಡ ಬಳಿಕ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಆ ಲಸಿಕಾ ಪ್ರಮಾಣ ಪತ್ರದಲ್ಲಿ ತೋರಿಸಲಾಗುತ್ತದೆ. ಇದನ್ನ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದ ವ್ಯಕ್ತಿಗೆ ಅದರಲ್ಲಿ ತಪ್ಪೇನಿದೆ ಎಂದು ಕೋರ್ಟ್ ಪ್ರಶ್ನಿಸಿದೆ.
ಪ್ರಧಾನಿ ಫೋಟೋ ಪ್ರಶ್ನಿಸಿ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಕೇರಳ ಕೋರ್ಟ್ ಮೊರೆ ಹೋಗಿದ್ದರು. ಅದರ ವಿಚಾರಣೆ ನಡೆಸಿದ, ನ್ಯಾಯಾಮೂರ್ತಿ ಕೆ ಕೃಷ್ಣನ್, ಪ್ರಧಾನಿ ಮೋದಿ ಅವರ ಭಾವಚಿತ್ರವಿದ್ದರೆ ನಿಮಗೆ ಸಮಸ್ಯೆ ಏನು..? ಅದನ್ನ ಯಾಕೆ ಪ್ರಶ್ನಿಸುತ್ತಿದ್ದೀರಿ..? ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಹೆಸರಿನಲ್ಲಿ ಹಲವಾರು ವಿಶ್ವವಿದ್ಯಾನಿಲಯಗಳಿವೆ ಅದನ್ನ ನೀವೂ ಪ್ರಶ್ನಿಸುತ್ತೀರಾ ಎಂದು ಕೇಳಿದೆ.
ಭಾರತ ಹೊರತು ಪಡಿಸಿ ಉಳಿದ ದೇಶಗಳಲ್ಲಿ ಅವರ ದೇಶದ ಪ್ರಧಾನಿ ಅಥವಾ ಅಧ್ಯಕ್ಷರ ಫೋಟೋ, ಲಸಿಕೆ ಪ್ರಮಾಣ ಪತ್ರದಲ್ಲಿ ಇಲ್ಲ. ಆದರೆ ಭಾರತದ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿಯ ಫೋಟೋ ಇದೆ. ಇದರಲ್ಲಿ ತಪ್ಪೇನಿಲ್ಲ. ಬೇರೆ ದೇಶದವರು ಅವರ ಪ್ರಧಾನಿಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿಲ್ಲ. ಆದರೆ ಭಾರತೀಯರು ಪ್ರಧಾನಿಗಳ ಬಗ್ಗೆ ಹೆಮ್ಮೆ ಪಡುತ್ತಾರೆ. ಈ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳಿರಬಹುದು ಆದರೆ ಅವರು ನಮ್ಮ ದೇಶದ ಪ್ರಧಾನಿ. ದೇಶದಲ್ಲಿರುವ 100 ಕೋಟಿ ಜನ ಈ ಬಗ್ಗೆ ಪ್ರಶ್ನೆ ಮಾಡಿಲ್ಲ. ನೀವು ಯಾಕೆ ಪ್ರಶ್ನಿಸಿದ್ದೀರಿ ಎಂದು ಕೋರ್ಟ್ ಮಾಹಿತಿ ಹಕ್ಕು ಕಾರ್ಯಕರ್ತನಿಗೆ ಪ್ರಶ್ನೆ ಕೇಳಿದೆ.