ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ವರ್ಸಸ್ ಎಎಪಿ ಪಕ್ಷದ ಕಿತ್ತಾಟ ತಾರಕಕ್ಕೇರಿದೆ. ಇತ್ತಿಚೆಗಷ್ಟೇ ಮಹಾನಗರ ಪಾಲಿಕೆಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೇರಿದೆ. ಇದರಿಂದ ಪಾಲಿಕೆಯ ಒಳಗೆ ರಣರಂಗವೇ ಆಗಿ ಹೋಗಿದೆ. ಪಾಲಿಕೆ ಸದಸ್ಯರು ಎನ್ನದೆ ಎಲ್ಲರೂ ಚಪ್ಪಲಿ, ಚೇರು ಅಂತ ಸಿಕ್ಕಿ ಸಿಕ್ಕಿದರಲ್ಲಿ ಹೊಡೆದಾಡಿದ್ದಾರೆ. ಈಗ ನಿನ್ನೆಯಷ್ಟೇ ಎಎಪಿ ಪಕ್ಷದ ಮನೀಶ್ ಸಿಸೋಡಿಯಾ ಅರೆಸ್ಟ್ ಆಗಿದ್ದು, ಸಿಎಂ ಕೇಜ್ರಿವಾಲ್ ಮತ್ತಷ್ಟು ಆಕ್ರೋಶ ಹೊರ ಹಾಕಿದ್ದಾರೆ.

ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರ ಮುಕ್ತ ಮಾಡುವ ಮಂತ್ರ ಹೇಳಿ ಅಧಿಕಾರಕ್ಕೆ ಏರಿದೆ. ಅದರಂತೆ ಭ್ರಷ್ಟಾಚಾರದ ವಿರುದ್ಧವೂ ಹೋರಾಟ ನಡೆಸಿದೆ. ಆದರೆ ಎಎಪಿ ಸರ್ಕಾರದ ಒಳಗಿರುವ ಕೆಲವರು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಈಗಾಗಲೇ ಆರೋಗ್ಯ ಸಚಿವರಾಗಿದ್ದ ಸತ್ಯೇಂದ್ರ ಜೈನ್ ಅಕ್ರಮ ಹಣ ವರ್ಗಾವಣೆ ಕೇಸ್ ನಲ್ಲಿ ಜೈಲು ಪಾಲಾಗಿದ್ದಾರೆ. ಈಗ ಕೇಜ್ರಿವಾಲ್ ಅತ್ಯಾಪ್ತ ಮನೀಶ್ ಸಿಸೋಡಿಯಾ ನಿನ್ನೆ ಬಂಧನವಾಗಿದೆ.

ಇದರಿಂದ ದೆಹಲಿಯಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಈ ಬಗ್ಗೆ ಸಿಎಂ ಕೇಜ್ರಿವಾಲ್ ಆಕ್ರೋಶ ಹೊರ ಹಾಕಿದ್ದು, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಗೂಂಡಾಗಿರಿ ಮಾಡ್ತಿದೆ. ಮನೀಶ್ ಸಿಸೋಡಿಯಾ ಅವರನ್ನು ಬೇಕಂತಲೇ ಅರೆಸ್ಟ್ ಮಾಡಿದ್ದಾರೆ. ಇದು ಗೂಂಡಾಗಿರಿಯ ಪರಮಾವಧಿ. ಇದಕ್ಕೆಲ್ಲಾ ನಾವೂ ಹೆದರುವುದಿಲ್ಲ ಎಂದಿದ್ದಾರೆ.

