ಸುಗ್ರಿವಾಜ್ಞೆ ವಿಚಾರದಲ್ಲಿ ಎಎಪಿಗೆ ಕಾಂಗ್ರೆಸ್ ಬೆಂಬಲ ಸೂಚಿಸಿದ ಬೆನ್ನಲ್ಲೇ ವಿಪಕ್ಷಗಳ ಸಭೆಗೆ ಕೇಜ್ರಿವಾಲ್ ಹಾಜರಿ

ನವದೆಹಲಿ: ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಯನ್ನು ಮಕಾಡೆ ಮಲಗಿಸಿದ್ದಾಯ್ತು. ಇದೀಗ ಲೋಲಸಭಾ ಚುನಾವಣೆಯಲ್ಲಿ ಸೋಲಿಸುವ ಪ್ಲ್ಯಾನ್ ನಡೆಯುತ್ತಿದ್ದು, ಎಲ್ಲಾ ರಾಜ್ಯದ ವಿಪಕ್ಷಗಳ ಸಭೆ ನಡೆಸಲು ಕಾಂಗ್ರೆಸ್‌ ಈಗಾಗಲೇ ಪ್ಲ್ಹಾನ್ ಸಿದ್ಧತೆ ನಡೆಸಿದೆ. ಈ ಸಭೆಗೆ ಇದೀಗ ದೆಹಲಿ ಸಿಎಂ ಕೇಜ್ರಿವಾಲ್ ಕೂಡ ಬೆಂಬಲ ಸೂಚಿಸಿದ್ದಾರೆ.

ಅದರಲ್ಲೂ ಕಾಂಗ್ರೆಸ್ ಸುಗ್ರೀವಾಜ್ಞೆಗೆ ಒಪ್ಪಿಗೆ ಸೂಚಿಸಿದ ಬಳಿಕ ಇಂಥದ್ದೊಂದು ಬೆಳವಣಿಗೆ ನಡೆದಿದೆ. ಜೂನ್ 23ರಂದು ಪಾಟ್ನಾದಲ್ಲಿ ಪ್ರತಿಪಕ್ಷ ನಾಯಕರ ಸಭೆ ನಡೆದಿತ್ತು. ಸುಗ್ರೀವಾಜ್ಞೆ ವಿಚಾರದಲ್ಲಿ ದೆಹಲಿ ಸರ್ಕಾರ ಹಾಗೂ ಎಎಪಿಯನ್ನು ಬೆಂಬಲಿಸದ ಪ್ರತಿ ಪಕ್ಷಗಳ ವಿರುದ್ಧ ಸಿಎಂ ಅರವಿಂದ್ ಕೇಜ್ರಿವಾಲ್ ಆಕ್ರೋಶ ಹೊರ ಹಾಕಿದ್ದರು.

ತೃಣಮೂಲ ಕಾಂಗ್ರೆಸ್‌ನಿಂದ ತೊಡಗಿ ಆರ್‌ಜೆಡಿ, ಜೆಡಿಯು, ಎನ್‌ಸಿಪಿ, ಸಮಾಜವಾದಿ ಪಕ್ಷ, ಉದ್ಧವ್ ಠಾಕ್ರೆ ಅವರ ಶಿವಸೇನೆ ಎಲ್ಲರೂ ಈ ದೇಶವಿರೋಧಿ ಸುಗ್ರೀವಾಜ್ಞೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಇದನ್ನು ಸೋಲಿಸಲು ನಾವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ರಾಘವ್ ಹೇಳಿದ್ದಾರೆ. ಅಂದು ಕಾಂಗ್ರೆಸ್ ಹೊರತುಪಡಿಸಿ ಉಳಿದೆಲ್ಲಾ ರಾಷ್ಟ್ರೀಯ ಪಕ್ಷಗಳು ಸುಗ್ರಿವಾಜ್ಞೆಗೆ ಬೆಂಬಲ ನೀಡೋದಾಗಿ ತಿಳಿಸಿದ್ದವು. ಇದೀಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಪ್ರತಿಪಕ್ಷಗಳ ಸಹಾಯ ಬೇಕಾಗಿದೆ. ಹೀಗಾಗಿ ಇದ್ದಕ್ಕಿದ್ದ ಹಾಗೇ ಕಾಂಗ್ರೆಸ್ ಕೂಡ ಬೆಂಬಲ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *