ಮಂಡ್ಯ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಚುನಾವಣೆಗೆ ನುಗ್ಗುತ್ತಿದೆ. ಆದರೆ ಎಷ್ಟು ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಜೆಪಿ ಬಿಟ್ಟುಕೊಡಲಿದೆ ಎಂಬುದು ಮಾತ್ರ ಇನ್ನು ತೀರ್ಮಾನವಾಗಿಲ್ಲ. ಇದರ ಮಧ್ಯೆ ಹೆಚ್ಚು ಚರ್ಚೆಗೆ ಗ್ರಾಸವಾಗಿರುವುದು ಮಂಡ್ಯ ಕ್ಷೇತ್ರ.
ಕಳೆದ ಬಾರಿಯ ಮಂಡ್ಯ ವಿಧಾನಸಭಾ ಕ್ಷೇತ್ರದ ಚುನಾವಣೆ ಬಾರಿ ಜಿದ್ದಾಜಿದ್ದಿನ ಚುನಾವಣೆಯಾಗಿ ಮಾರ್ಪಟ್ಟಿತ್ತು. ಸುಮಲತಾ ವಿರುದ್ಧ ನಿಖಿಲ್ ಏನೇ ತಂತ್ರ ಮಾಡಿದರು ಗೆದ್ದಿದ್ದು ಮಾತ್ರ ಅಂಬರೀಶ್ ಅಭಿಮಾನ. ಈ ಬಾರಿ ಸುಮಲತಾ ಸ್ಪರ್ಧೆ ಕೂಡ ಅತಂತ್ರವಾಗುವ ಸಾಧ್ಯತೆ ಇದೆ. ಜೆಡಿಎಸ್ ಮಂಡ್ಯ ಬಿಟ್ಟುಕೊಡುವುದಕ್ಕೆ ಸಾಧ್ಯವೇ ಇಲ್ಲ. ಇತ್ತ ಸುಮಲತಾ ಬೇರೆ ಸ್ವತಂತ್ರ ಅಭ್ಯರ್ಥಿಯಾಗಿದ್ರು. ಆದ್ರೆ ಇತ್ತಿಚೆಗೆ ಬಿಜೆಪಿ ಬೇರೆ ಸೇರಿದ್ದಾರೆ. ಮೈತ್ರಿಯಲ್ಲಿ ಒಂದು ವೇಳೆ ಮಂಡ್ಯ ಕ್ಷೇತ್ರ ಬಿಟ್ಟುಕೊಡಬೇಕಾಗಿ ಬಂದರೆ, ಸುಮಲತಾ ಮುಂದಿನ ನಿರ್ಧಾರ ಏನು ಮಾಡ್ತಾರೆ ಅನ್ನೋ ಕುತೂಹಲವಿದೆ.
ಇದರ ನಡುವೆ ಕೆಸಿ ನಾರಾಯಣಗೌಡ ಸುಮಲತಾ ಅವರಿಗೇನೆ ಬೆಂಬಲ ನೀಡಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್ ಪ್ರಭಾವ ಇದ್ದಿದ್ದರೆ ಕಳೆದ ಬಾರಿಯೇ ಗೆಲ್ಲುತ್ತಿದ್ದರು. ಆದರೆ ಅವರು ಸೋತಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ಜನ ಶಾಸಕರು ಇದ್ದರು. ಸಂಸದೆ ಸುಮಲತಾ ಪಕ್ಷಕ್ಕೆ ಸಹಕಾರ ನೀಡಿದ್ದಾರೆ. ಹೀಗಾಗಿ ಈ ಬಾರಿ ಸುಮಲತಾಗೆ ಟಿಕೆಟ್ ನೀಡಬೇಕು ಎಂದಿದ್ದಾರೆ.