ಇಂಧನ ಬೆಲೆ ಏರಿಕೆಯಿಂದಾಗಿ ಹೊತ್ತಿದ ಕಿಡಿ ಖಜಕಿಸ್ತಾನದಲ್ಲಿ ಅಕ್ಷರಶಃ ಯುದ್ಧಭೂಮಿಯಂತೆ ಸೃಷ್ಟಿಯಾಗಿದೆ. ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಹಿಂಸಾಚಾರಕ್ಕೆ ಅಲ್ಲಿನ ಜನ ನಲುಗಿ ಹೋಗಿದ್ದಾರೆ. ಈ ಹಿಂಸಾಚಾರದಿಂದಾಗಿ ಸುಮಾರು 160 ಜನ ಪ್ರಾಣ ಕಳೆದುಕೊಂಡಿದ್ದಾರೆ.
ಅಲ್ಮಾಟಿ ನಗರವೊಂದರಲ್ಲೇ 103 ಮಂದಿ ಪ್ರಾಣ ಬಿಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. 16 ಮಂದಿ ಭದ್ರತಾ ಸಿಬ್ಬಂದಿಯೂ ಪ್ರಾಣ ತೆತ್ತಿದ್ದಾರೆ. ಅಷ್ಟೆ ಅಲ್ಲ, ಈ ಹಿಂಸಾಚಾರದ ನಡುವೆ ನೂರಾರು ಬ್ಯಾಂಕ್ ಗಳನ್ನು ಲೂಟಿ ಮಾಡಲಾಗಿದೆ, 400 ಕ್ಕೂ ಹೆಚ್ಚು ವಾಹನಗಳು ಧ್ವಂಸವಾಗಿವೆ.
ಇದಕ್ಕೆಲ್ಲಾ ಕಾರಣ ಇಂಧನ ಬೆಲೆ ಏರಿಕೆ ಎನ್ನಲಾಗಿದೆ. ಖಜಕಿಸ್ತಾನದಲ್ಲಿ ಅಪಾರ ನೈಸರ್ಗಿಕ ಸಂತ್ತು ಇದ್ದರು ಅಲ್ಲಿನ ಸರ್ಕಾರ ರಾತ್ರೋ ರಾತ್ರಿ ಇಂಧನ ಬೆಲೆ ಏರಿಕೆ ಮಾಡಿದೆ. ಎಲ್ಪಿಜಿ ಬೆಲೆ 8 ರೂಪಾಯಿ ಇದ್ದದ್ದನ್ನು ದಿಢೀರನೆ ಏರಿಕೆ ಮಾಡಿದೆ. ಇದು ಪ್ರತಿಭಟನಕಾರರನ್ನ ಕೆರಳಿಸಿದೆ. ಇಂಧನ ಬೆಲೆ ಏರಿಕೆ ಸಂಬಂಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಸಾವು ನೋವುಗಳು ಮುಂದುವರೆದಿವೆ.