ತಮಿಳುನಾಡು ಆಗಾಗ ಕಾವೇರಿ ನದಿ ನೀರಿಗಾಗಿ ಕ್ಯಾತೆ ತೆಗೆಯುತ್ತಲೆ ಇತ್ತು. ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಿತ್ತು. ಬಳಿಕ ಕರ್ನಾಟಕದಿಂದ ಸುಪ್ರೀಂ ಕೋರ್ಟ್ ಸೂಚಿಸಿದಂತೆ ನೀರು ಬಿಡುವುದಕ್ಕೂ ರೆಡಿಯಾಗಿತ್ತು. ಅಷ್ಟೆ ಅಲ್ಲ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ನೀರನ್ನು ಬಿಡುಗಡೆ ಮಾಡಲಾಗಿದೆ. ಆದರೆ ತಮಿಳುನಾಡು ಮಾತ್ರ ಕಾವೇರಿ ನೀರನ್ನೆಲ್ಲ ಸಮುದ್ರದ ಪಾಲು ಮಾಡಿದೆ.
ಕಳೆದ 50 ವರ್ಷದಲ್ಲಿ ಇದೇ ಮೊದಲ ಬಾರಿಗೆ ಸುಮಾರು 700ಟಿಎಂಸಿಗಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದೆ. ತಮಿಳುನಾಡಿನಲ್ಲಿ ಮೆಟ್ಟೂರು ಹಾಗೂ ಭವಾನಿ ಸಾಗರ್ ಡ್ಯಾಂಗಳು ಮಾತ್ರ ಇದೆ. ಈ ಎರಡು ಡ್ಯಾಂಗಳಲ್ಲಿ 120 ಟಿಎಂಸಿ ನೀರನ್ನು ಮಾತ್ರ ಸಂಗ್ರಹಿಸಿಟ್ಟುಕೊಳ್ಳಬಹುದು. ಕರ್ನಾಟಕ ಬಿಟ್ಟ ನೀರನ್ನು ಹೆಚ್ಚು ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ಸಾಧ್ಯವಿರದ ಕಾರಣ, ಆ ನೀರನ್ನು ಸಮುದ್ರದ ಪಾಲು ಮಾಡಿದೆ.
ಇತ್ತ ಮೇಕೆದಾಟು ಯೋಜನೆಗೆ ಅನುಮತಿ ನೀಡಿದರೆ, ತಮಿಳುನಾಡು ಕೂಡ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ. ಮೇಕೆದಾಟು ಬಳಿಯ ಉದ್ದೇಶಿತ ಡ್ಯಾಂನಲ್ಲಿ 67 ಟಿಎಂಸಿ ನೀರು ಇಟ್ಟುಕೊಳ್ಳಲು ಕರ್ನಾಟಕ ಪ್ಲ್ಯಾನ್ ಮಾಡಿದೆ. ಆದರೆ ಕರ್ನಾಟಕದ ಈ ಯೋಜನೆಗೆ ತಮಿಳುನಾಡು ಸುತಾರಾಮ್ ಒಪ್ಪುತ್ತಿಲ್ಲ.