ಸಾಹಿತ್ಯ ಪರಿಷತ್ತು ಚುನಾವಣೆ ಮುಕ್ತವಾಗಿ ನಡೆಯಬೇಕು : ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ

ಚಳ್ಳಕೆರೆ, (ನ.11) :  ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪಗಳಿಲ್ಲದೆ ಸಾಮಾಜಿಕವಾಗಿ ಚುನಾವಣೆ ನಡೆಯಲಿ ಎಂದು ಮಾಜಿ ಶಾಸಕ, ಕಸಾಪ ಸದಸ್ಯ ಎಸ್.ತಿಪ್ಪೇಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೆ. ತಿಪ್ಪೇಸ್ವಾಮಿ ಕೊರ್ಲಕುಂಟೆ ನಗರದಲ್ಲಿ ಗುರುವಾರ ಭೇಟಿ ಮಾಡಿ ಮತ ಯಾಚನೆ ಮಾಡಿದ ವೇಳೆ ಮಾತನಾಡಿದರು.

ರಾಜಕೀಯ ಮುಕ್ತವಾಗಿರುವ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಮೌಲ್ಯತೆ ಇದೆ. ಪ್ರತಿಯೊಬ್ಬರ ಅಭಿಮಾನದ ಕನ್ನಡದ ಸಂಸ್ಥೆಯಾಗಿದೆ. ಇದರ ಮಹತ್ವ ಕಾಪಾಡುವಂತ ಮನೋಭಾವನೆ ಇರುವವರು ಚುನಾಯಿತರಾಗಬೇಕು. ಸಾಹಿತ್ಯ ಕಾರ್ಯಕ್ರಮಗಳಿಂದ ಜಿಲ್ಲೆಗೆ ಪರಿಚಿತರಿರುವ ಕೊರ್ಲಕುಂಟೆ ತಿಪ್ಪೇಸ್ವಾಮಿ ಈ ಬಾರಿ ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿ ಪ್ರಮುಖರಾಗಿದ್ದಾರೆ. ಇಂತಹ ಗಡಿಭಾಗದ ಅಭ್ಯರ್ಥಿ ಮತ್ತು ನಿರಂತರ ಸಾಹಿತ್ಯ ಕಾರ್ಯಕ್ರಮಗಳಿಂದ ಗುರುತಿಸಿಕೊಂಡಿರುವ ತಿಪ್ಪೇಸ್ವಾಮಿ ಅವರಿಗೆ ಕಸಾಪ ಬೆಂಬಲಿಸಬೇಕು ಎಂದು ಹೇಳಿದರು.

ಸಿನಿಮಾ ನಿರ್ದೇಶಕ ಮೊಳಕಾಲ್ಮೂರು ಶ್ರೀನಿವಾಸಮೂರ್ತಿ ಮಾತನಾಡಿ, ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರ ಸಾಹಿತ್ಯ ಸೇವೆ ವಿಶ್ಲೇಷಣೆ ಆಗುತ್ತಿದೆ. ನಾಲ್ಕು ಕವನ ಸಂಕಲನಗಳನ್ನು ಸಾಹಿತ್ಯ ವಲಯಕ್ಕೆ ನೀಡಿರುವ ತಿಪ್ಪೇಸ್ವಾಮಿ ಅವರಿಗೆ ಜಿಲ್ಲೆಯ ಬರಹಗಾರರು ಮತ್ತು ಸಾಹಿತ್ಯ ಪರಿಷತ್ತಿನ ಸದಸ್ಯರ ಒಡನಾಟ ಇದೆ. ಇನ್ನಷ್ಟು ಸಾಹಿತ್ಯ ಕಾರ್ಯಕ್ರಮಗಳ ಬೆಳವಣಿಗೆಗೆ ತಿಪ್ಪೇಸ್ವಾಮಿ ಅವರ ಆಯ್ಕೆ ಸೂಕ್ತವಾಗಿದೆ. ಸದಸ್ಯರು ದೂರದೃಷ್ಟಿಯ ಚಿಂತನೆಯಲ್ಲಿ ತಿಪ್ಪೇಸ್ವಾಮಿ ಪರ ಮತ ನೀಡಲಿ ಎಂದು ಮನವಿ ಮಾಡಿದರು.

ನಗರಸಭಾ ಮಾಜಿ ಸದಸ್ಯ ಎಂ. ಶಿವಮೂರ್ತಿ, ತಾಪಂ ಮಾಜಿ ಸದಸ್ಯ ಎಚ್. ಸಮರ್ಥರಾಯ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ. ಈಶ್ವರಪ್ಪ, ಕಸಾಪ ಸದಸ್ಯರಾದ ಯಾದಲಗಟ್ಟೆ ಜಗನ್ನಾಥ, ಪಿ. ಗಂಗಾಧರ, ಖಾಸಗಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ದೊಡ್ಡ ಉಳ್ಳಾರ್ತಿ ಗೌರೀಶ, ಡಿ. ಲಿಂಗರಾಜ, ಜಾಲಿ ಮಂಜು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!