ಚಿತ್ರದುರ್ಗ | ಪ್ರೇಕ್ಷಣೀಯ ಸ್ಥಳಗಳ ಸುತ್ತಮುತ್ತ ಒತ್ತುವರಿ ತೆರವುಗೊಳಿಸಲು ಕರುನಾಡ ವಿಜಯಸೇನೆ ಒತ್ತಾಯ

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 11 : ಐತಿಹಾಸಿಕ ಚಿತ್ರದುರ್ಗದ ಕೋಟೆ, ಸ್ಮಾರಕಗಳು, ಪ್ರೇಕ್ಷಣೀಯ ಸ್ಥಳಗಳ ಸುತ್ತಮುತ್ತ ಒತ್ತುವರಿಯಾಗಿರುವುನ್ನು ತೆರವುಗೊಳಿಸುವಂತೆ ಕರುನಾಡ ವಿಜಯಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ವಾಸವಿ ಶಾಲೆ ಹತ್ತಿರ ಧರ್ಮಶಾಲೆ ರಸ್ತೆ ಸಮೀಪವಿರುವ ಬತೇರಿ, ಸಿಹಿನೀರು ಹೊಂಡ, ಬುರುಜನಹಟ್ಟಿ ಸುತ್ತಮುತ್ತಲಿನ ಸ್ಥಳಗಳಲ್ಲಿ ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಬೆಟ್ಟ-ಗುಡ್ಡಗಳಲ್ಲಿ ಇಸ್ಪಿಟ್, ಗಾಂಜಾ ಇನ್ನಿತರೆ ದಂಧೆಗಳು ನಡೆಯುತ್ತಿವೆ. ಕೋಟೆಯಲ್ಲಿ ಗಿಡ ಗಂಟೆಗಳು ಬೆಳೆದಿದ್ದು, ರಕ್ಷಣೆಯಿಲ್ಲದಂತಾಗಿದೆ. ಜೀಜಾಹರಿಸಿಂಗ್ ಚಿತ್ರದುರ್ಗ ರಕ್ಷಣಾಧಿಕಾರಿಯಾಗಿದ್ದಾಗ ಕೋಟೆಯಲ್ಲಿ ಗನ್‍ಮ್ಯಾನ್‍ಗಳನ್ನು ನೇಮಿಸಿದ್ದರು. ಇದರಿಂದ ಕೋಟೆಗೆ ರಕ್ಷಣೆಯಿತ್ತಲ್ಲದೆ. ಪ್ರವಾಸಿಗರು ನಿರ್ಭಯವಾಗಿ ಕೋಟೆ ವೀಕ್ಷಿಸಿ ಹಿಂದಿರುಗುತ್ತಿದ್ದರು. ಸರ್ವೆ ನಂ.25 ರಲ್ಲಿ 300 ಎಕರೆ ಮತ್ತು ಸರ್ಕಾರಿ ಖರಾಬು 239.18 ಎಕರೆಯಿದ್ದು ನಾಲ್ಕೈದು ಅನಧಿಕೃತ ಬಡಾವಣೆಗಳು ತಲೆಎತ್ತುತ್ತಿವೆ. ಶಾಲಾ-ಕಾಲೇಜುಗಳನ್ನು ಕಟ್ಟಲಾಗಿದೆ. ಹಳೆಯ ರೂಪಾವಣಿ ಚಿತ್ರಮಂದಿರ, ಬಸವಮಂಟಪ, ಉಜ್ಜಯಿನಿ ಮಠ ಹೀಗೆ ಭಾಗಶಃ ಒತ್ತುವರಿಯಾಗಿದೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಜಿಲ್ಲಾಡಳಿತಕ್ಕೆ ದೂರಿದರು.

ಕರುನಾಡ ವಿಜಯಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಕಾರ್ಯದರ್ಶಿ ಜಗದೀಶ್, ಅಣ್ಣಪ್ಪ, ರತ್ನಮ್ಮ, ವಿಜಯಬಾಬು
ಅವಿನಾಶ್, ಅಖಿಲೇಶ್, ಮಧುಸೂದನ್ ಕೆ.ಎನ್. ಇವರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share This Article
Enable Notifications OK No thanks