ಚಿತ್ರದುರ್ಗ,(ನ.04) : ಇದೇ ನವೆಂಬರ್ 6ರಂದು ನಡೆಯುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಶೂ ಮತ್ತು ಬೆಲ್ಟ್ ಧರಿಸಿ ಬರುವುದುನ್ನು ನಿಷೇಧಿಸಿದೆ.
ಪ್ರವೇಶ ಪತ್ರದಲ್ಲಿ ತಮ್ಮ ಸಹಿ ಮತ್ತು ಭಾವಚಿತ್ರ ಪ್ರಕಟವಾಗದಿರುವ ಅಥವಾ ಸಹಿ ವ್ಯತ್ಯಾಸವಿರುವ ಅಭ್ಯರ್ಥಿಯು ತನ್ನೊಂದಿಗೆ ಆನ್ಲೈನ್ ಅರ್ಜಿ, ತಮ್ಮ ಇತ್ತೀಚಿನ ಭಾವಚಿತ್ರ ಮತ್ತು ಆಧಾರ್ ಕಾರ್ಡ್ ಅಥವಾ ಇನ್ನಾವುದೇ ಅಧಿಕೃತ ಗುರುತಿನ ಚೀಟಿಯನ್ನು ಪರೀಕ್ಷಾ ಕೇಂದ್ರದ ಅಧಿಕಾರಿಗಳಿಗೆ ಹಾಜರುಪಡಿಸುವಂತೆ ಕೇಂದ್ರಿಯ ದಾಖಲಾತಿ ಘಟಕ ವಿಶೇಷಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.