ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 01 : ಕೇಂದ್ರ ಸರ್ಕಾರ ಶನಿವಾರ ಮಂಡಿಸಿರುವ ಬಜೆಟ್‍ನಲ್ಲಿ ಕೈಗಾರಿಕೆ ಮತ್ತು ಉದ್ಯೋಗ ಸೃಷ್ಟಿಸುವ ಕ್ಷೇತ್ರಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದೊಂದು ಕರ್ನಾಟಕ ರಾಜ್ಯ ವಿರೋಧಿ ಬಜೆಟ್ ಎಂದು ಚಳ್ಳಕೆರೆಯ ಕೋಟೆ ಬೋರಮ್ಮ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಸಂಜೀವಕುಮಾರ ಪೋತೆ ಟೀಕಿಸಿದ್ದಾರೆ.
ಯುವ ಪೀಳಿಗೆಗೆ ಉದ್ಯೋಗ ಸೃಷ್ಟಿಸುವಲ್ಲಿ ಹಾಗೂ ಹಣದುಬ್ಬರ ನಿಯಂತ್ರಣಕ್ಕೆ ಪೂರಕವಲ್ಲದ ಬಜೆಟ್ ಇದಾಗಿದೆ. ಜನಸಾಮಾನ್ಯರ ಅನುಭೋಗದ ವೆಚ್ಚದ ಕಡೆ ಗಮನ ಕೇಂದ್ರಿಕರಿಸಿದೆಯೇ ವಿನಃ ದೊಡ್ಡ ಪ್ರಮಾಣದ ಉತ್ಪಾದನೆ ಕೈಗೊಳ್ಳುವ ಉದ್ಯಮಕ್ಕೆ ಬಜೆಟ್‍ನಲ್ಲಿ ಆದ್ಯತೆಯಿಲ್ಲ. ರೈತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಬಜೆಟ್‍ನಲ್ಲಿ ಪ್ರಸ್ತಾಪಿಸಿಲ್ಲ. ದೇಶದ ಆರ್ಥಿಕ ಪ್ರಗತಿಯನ್ನು ಮನದಲ್ಲಿಟ್ಟುಕೊಂಡು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸಬೇಕಿತ್ತೆಂಬ ಅಭಿಪ್ರಾಯವನ್ನು ಡಾ.ಸಂಜೀವಕುಮಾರ ಪೋತೆ ವ್ಯಕ್ತಪಡಿಸಿದ್ದಾರೆ.