ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಕೊರೊನಾ ವೈರಸ್ ಶೈಕ್ಷಣಿಕ ಬೆಳವಣಿಗೆಯನ್ನೇ ಅಧೋಗತಿಗೆ ತಳ್ಳಿದೆ. ಇನ್ನೇನು ಎಲ್ಲವೂ ಸರಿ ಆಯ್ತು ಎಂದು ಶಾಲೆ ಆರಂಭ ಮಾಡಿದರೆ ಮತ್ತೆ ಕೊರೊನಾ ವೈರಸ್ ಹೆಚ್ಚಳವಾಗುತ್ತಿತ್ತು. ಹೇಗೋ ಈ ಬಾರಿ ಎಲ್ಲಾ ಪರೀಕ್ಷೆಗಳನ್ನು ಸರಾಗವಾಗಿ ಮುಗಿಸಲಾಗಿದೆ.
ಹೀಗಾಗಿ 2022-23ರ ಶೈಕ್ಷಣಿಕ ವರ್ಷ ನಾಳೆಯಿಂದಲೇ ಆರಂಭವಾಗುತ್ತಿದೆ. ಹದಿನೈದು ದಿನಗಳ ಮುಂಚಿತವಾಗಿಯೇ ಶುರು ಮಾಡುತ್ತಿದ್ದಾರೆ. ಹೀಗಾಗಿ ಮಕ್ಕಳನ್ನು ಸ್ವಾಗತಿಸಲು ಶಾಲೆಯಲ್ಲಿಯೂ ಪ್ರಿಪರೇಷನ್ ನಡೆಯುತ್ತಿದೆ. ಮುಂಚಿತವಾಗಿ ಪ್ರಾರಂಭವಾಗುತ್ತಿರುವ ಈ ಹದಿನೈದು ದಿನ ಕಾಮನಬಿಲ್ಲು ಮತ್ತು ಕಲಿಕಾ ಚೇತರಿಕೆ ಎಂಬ ವಿಶಷ ಕಾರ್ಯಕ್ರಮ ಮಾಡಲಾಗುತ್ತಿದೆ.
ಈ ಎರಡು ವರ್ಷದಿಂದ ಕೊರೊನಾ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಈಗ ಎಲ್ಲವೂ ಸರಿ ಇದೆ ಎಂಬುದಾಗಿಯೂ ಹೇಳುವಂತಿಲ್ಲ. ಕೊರೊನಾ ಬೇರೆ ರಾಜ್ಯದಲ್ಲಿ ಮತ್ತೆ ಹೆಚ್ಚಳವಾಗುತ್ತಿದೆ. ಹೀಗಾಗಿ ಶಾಲೆಯಲ್ಲಿ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲೇಬೇಕಾಗಿದೆ. ಶಾಲೆಗೆ ಆಗಮಿಸಿದಾಗ ಮಕ್ಕಳಿಗೆ ಚೆಕಪ್ ಮಾಡಲಾಗುತ್ತದೆ. ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಗಮನ ಹರಿಸಬೇಕಾಗುತ್ತದೆ. ಮಾಸ್ಕ್ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸ ಶಿಕ್ಷಕರು ಮಾಡಬೇಕೆಂದು ಸಚಿವರು ತಿಳಿಸಿದ್ದಾರೆ.