ರಾಯಚೂರು: ಮುಂದಿನ ಆದೇಶದ ತನಕ ಯಾರು ಧಾರ್ಮಿಕ ವಸ್ತ್ರ ಧರಿಸಿ ಶಾಲಾ ಕಾಲೇಜಿಗೆ ಬರುವ ಹಾಗಿಲ್ಲ ಎಂದು ಕೋರ್ಟ್ ಈಗಾಗಲೇ ಸೂಚಿಸಿದೆ. ಆದ್ರೂ ನ್ಯಾಯಾಲಯದ ಆದೇಶಕ್ಕೆ ಡೋಂಟ್ ಕೇರ್ ಎಂಬ ಘಟನೆಗಳು ನಡೆಯುತ್ತಿವೆ.
ಹುಬ್ಬಳ್ಳಿಯ ಕೌಲ್ ಪೇಟೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಹಿಜಾಬ್ ಧರಿಸಿಯೇ ಶಾಲೆಗೆ ಬಂದಿದ್ದರು. ಅದರ ಬೆನ್ನಲ್ಲೇ ರಾಯಚೂರಿನಲ್ಲೂ ಅಂತದ್ದೊಂದು ಘಟನೆ ನಡೆದಿದೆ. ನಗರದ ಮೌಲಾನಾ ಆಜಾದ್ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಹಿಜಾಬ್ ಧರಿಸಿ ಶಾಲೆಗೆ ಬಂದಿರುವ ಘಟನೆ ನಡೆದಿದೆ.
ಶಾಲೆಯಲ್ಲಿ ಈ ರೀತಿ ನ್ಯಾಯಾಲಯದ ಆದೇಶ ಮೀರಿ ನಡೆದುಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆ ಕಾಡಿದೆ. ಜಿಲ್ಲಾಡಳಿತ ಕೂಡ ಎಲ್ಲಾ ಶಾಲಾ-ಕಾಲೇಜು ಆಡಳಿತ ಮಂಡಳಿಗೆ ಸೂಚನೆ ನೀಡಿದೆ. ಆದರೂ ಈ ರೀತಿ ಘಟನೆ ನಡೆಯುತ್ತಿರುವುದು ಶಾಲಾ ಕಾಲೇಜು ಆಡಳಿತ ಮಂಡಳಿ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ.