Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಆಂಧ್ರ ಸರ್ಕಾರಕ್ಕೆ ಆನೆಗಳನ್ನು ನೀಡಿದ ಕರ್ನಾಟಕ ಸರ್ಕಾರ : ಇದರ ಹಿಂದಿದೆ ಸಾವಿರಾರು ವರ್ಷಗಳ ಇತಿಹಾಸ..!

---Advertisement---

ಬೆಂಗಳೂರು; ನಾವೆಲ್ಲಾ ಒಂದಷ್ಟು ವಿಚಾರಗಳನ್ನ ಇತಿಹಾಸ ಓದುವ ಮೂಲಕ ತಿಳಿದುಕೊಂಡಿದ್ದೇವೆ. ಅದರಲ್ಲಿ ಒಂದು ಆಂಧ್ರಪ್ರದೇಶದ ಸರ್ಕಾರಕ್ಕೆ ಆನೆಗಳನ್ನ ನೀಡುವುದು. ಹೌದು, ಇಂದು ನಮ್ಮ ರಾಜ್ಯ ಸರ್ಕಾರ ಆಂಧ್ರ ಪ್ರದೇಶಕ್ಕೆ ಆನೆಗಳನ್ನ ನೀಡಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಆನೆಗಳು ಬೇಕು ಅಂತ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಮನವಿಯೊಂದನ್ನ ಮಾಡಿದ್ದರು. ಆ ಮನವುಗೆ ಹೂಗೊಟ್ಟು ಇದೀಗ ಸಿದ್ದರಾಮಯ್ಯ ಸರ್ಕಾರ ಆನೆಗಳನ್ನ ನೀಡಿದೆ. ಅಷ್ಟೇ ಅಲ್ಲ ಆಂಧ್ರ ಮಾವುತರಿಗೆ ತರಬೇತಿಯನ್ನು ನೀಡಿದ್ದಾರೆ.

4 ಕುಮ್ಕಿ ಆನೆಗಳನ್ನ ನೀಡಲಾಗಿದೆ. ಆಂಧ್ರಪ್ರದೇಶದ ಕಾಡಾನೆಗಳ ನಿಯಂತ್ರಣಕ್ಕೆ ಕರ್ನಾಟಕದಿಂದ ತರಬೇತಿ ಪಡೆದಿರುವ ಕುಮ್ಕಿ ಆನಡಗಳನ್ನು ನೀಡುವಂತೆ ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮನವಿ ಮಾಡಿದ್ದರಹ. ಹೀಗಾಗಿ ವಿಧಾನಸೌಧದ ಗ್ತ್ಯಾಂಡ್ ಸ್ಟೆಪ್ಸ್ ಬಳಿ ನಡರದ ಕಾರ್ಯಕ್ರಮದಲ್ಲಿ ಕರ್ನಾಟಕ ಅರಣ್ಯ ಇಲಾಖೆಯೂ ನಾಲ್ಕು ಕುಮ್ಕಿ ಆನೆಗಳನ್ನ ಆಂಧ್ರಪ್ರದೇಶಕ್ಕೆ ಹಸ್ತಾಂತರ ಮಾಡಿದೆ.

ಈ ರೀತಿ ಆನೆಗಳನ್ನ ನೀಡಿರುವುದರ ಹಿಂದೆ ದೊಡ್ಡ ಇತಿಹಾಸವೇ ಅಡಗಿದೆ. 1410 ವರ್ಷಗಳ ಹಿಂದೆ ಚಾಲುಕ್ಯರ ಶ್ರೇಷ್ಠ ದೊರೆ ಇಮ್ಮಡಿ ಪುಲಿಕೇಶಿ ತನ್ನ ಸೋದರ ಕುಬ್ಜ ವಿಷ್ಣುವರ್ಧನನಿಗೆ ಆಂಧ್ರ ಪ್ರದೇಶದ ವೆಂಗಿ ಪ್ರಾಂತ್ಯವನ್ನ ನೀಡಿ, ಸ್ವತಂತ್ರ ದೊರೆಯಾಗಿ ಘೋಷಿಸಿ, ಪಟ್ಟಾಭಿಷೇಜ ಮಾಡಿದ್ದರು. ಅವತ್ತಿನಿಂದ ಕುಬ್ಜ ವಿಷ್ಣುವರ್ಧನ ವೆಂಗಿ ಚಾಲುಕ್ಯ ದೊರೆಯಾಗಿ ಅಖಂಡ ಆಂಧ್ರ ಪ್ರದೇಶವನ್ನಾಳಿದ್ದರು. ಇದೇ ಚಾಲುಕ್ಯರ ಅವಧಿಯಲ್ಲಿ ರೂಪುಗೊಂಡ ಚಾಲುಕ್ಯ ಲಿಪಿಯೇ ಬಾದಾಮಿ ಚಾಲುಕ್ಯರಿಗೂ, ವೆಂಗಿ ಚಾಲುಕ್ಯರಿಗೂ ತಾಯಿ ಲಿಪಿ ಆಗಿತ್ತು. ಆ ಲಿಪಿಯ ರೂಪಾಂತರದ ಲಿಪಿಗಳೇ ಇವತ್ತಿನ ಕನ್ನಡ ಹಾಗೂ ತೆಲುಗು ಎಂಬುದು ಭಟಷಾಂತರ ತಜ್ಞರ ಅಭಿಪ್ರಾಯವಾಗಿದೆ. ಇವತ್ತು ಇದೆಲ್ಲವನ್ನೂ ಹೇಳುವುದಕ್ಕೆ ಸಾಕ್ಷಿ ಆಗಿದ್ದು ಆನೆಗಳು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...