Karnataka Exit Poll 2023 :  ಈ ಬಾರಿಯೂ  ಫಲಿತಾಂಶ ಅತಂತ್ರ ! ಯಾವ ಸಮೀಕ್ಷೆ, ಯಾರಿಗೆ ಎಷ್ಟು ಸ್ಥಾನ ? ಇಲ್ಲಿದೆ ಮಾಹಿತಿ…!

 

 

ಬೆಂಗಳೂರು, (ಮೇ.10) : ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ ಪೂರ್ಣಗೊಂಡಿದ್ದು, ಫಲಿತಾಂಶದಲ್ಲಿ ಈ ಬಾರಿಯೂ ಕೂಡಾ ಯಾರಿಗೂ ಬಹುಮತ ಸಿಗದೇ ಅತಂತ್ರ ಫಲಿತಾಂಶ ಲಭ್ಯವಾಗಲಿದೆ ಎಂದು ಮತದಾನೋತ್ತರ ಸಮೀಕ್ಷೆ ವರದಿ ಪ್ರಕಟವಾಗುತ್ತಿದೆ.

ಆರು ಎಕ್ಸಿಟ್ ಪೋಲ್‌ಗಳ ಪೈಕಿ ಐದು ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಲಿದೆ ಎಂದು ಹೇಳಿವೆ.

ಎಚ್‌ಡಿ ಕುಮಾರಸ್ವಾಮಿ ಅವರ ಜನತಾ ದಳ ಮತ್ತೊಮ್ಮೆ ಕಿಂಗ್‌ಮೇಕರ್ ಆಗುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.

224 ಸ್ಥಾನಗಳ ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ ಗಾಗಿ 113 ಸ್ಥಾನಗಳ ಅವಶ್ಯಕತೆ ಇದೆ.

ಝೀ ನ್ಯೂಸ್ ಮ್ಯಾಟ್ರಿಜ್ ಏಜೆನ್ಸಿ ಸಮೀಕ್ಷೆ ಪ್ರಕಾರ, ಕಾಂಗ್ರೆಸ್‌ಗೆ 118 ಸ್ಥಾನ ಬರಲಿದೆ.

ಬಿಜೆಪಿ 114, ಕಾಂಗ್ರೆಸ್ 86 ಮತ್ತು ಜೆಡಿಎಸ್ 21 ಸ್ಥಾನಗಳನ್ನು ಪಡೆಯಲಿದೆ ಎಂದು ನ್ಯೂಸ್ ನೇಷನ್-ಸಿಜಿಎಸ್ ಭವಿಷ್ಯ ನುಡಿದಿದೆ.

ರಾಜ್ಯದ ಆಡಳಿತಾರೂಢ ಬಿಜೆಪಿ 224 ವಿಧಾನಸಭಾ ಸ್ಥಾನಗಳಲ್ಲಿ 85-100, ಕಾಂಗ್ರೆಸ್ 94-108 ಮತ್ತು ಜೆಡಿಎಸ್ 24-32 ಸ್ಥಾನಗಳನ್ನು ಗೆಲ್ಲಲಿದೆ ಎಂದು ರಿಪಬ್ಲಿಕ್ ಟಿವಿ-ಪಿ ಮಾರ್ಕ್ ಭವಿಷ್ಯ ನುಡಿದಿದೆ.

TV 9-Bharatvansh-Polstrat ಬಿಜೆಪಿಗೆ 88-98 ಸ್ಥಾನಗಳು, ಕಾಂಗ್ರೆಸ್‌ಗೆ 99-109 ಸ್ಥಾನಗಳು ಮತ್ತು ಜೆಡಿಎಸ್‌ಗೆ 21-26 ಸ್ಥಾನಗಳು ಬರಲಿವೆ ಎಂದು ಭವಿಷ್ಯ ನುಡಿದಿದೆ.

ಝೀ ನ್ಯೂಸ್ ಮ್ಯಾಟ್ರಿಜ್ ಬಿಜೆಪಿಗೆ 79-94 ಸ್ಥಾನಗಳು ಮತ್ತು ಕಾಂಗ್ರೆಸ್‌ಗೆ 103-118 ಸ್ಥಾನಗಳು ಮತ್ತು ಜೆಡಿಎಸ್‌ಗೆ 25-33 ಸ್ಥಾನಗಳು ಎಂದು ಭವಿಷ್ಯ ನುಡಿದಿದೆ.

ಸುವರ್ಣ ನ್ಯೂಸ್-ಜಾನ್ ಕಿ ಬಾತ್ ಬಿಜೆಪಿಗೆ ಬಲ ನೀಡಿದೆ, ಪಕ್ಷವು 94 ರಿಂದ 117 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ. ಕಾಂಗ್ರೆಸ್ 91-106 ಸ್ಥಾನಗಳನ್ನು ಮತ್ತು ಜೆಡಿಎಸ್ 14-24 ಸ್ಥಾನಗಳನ್ನು ಪಡೆಯಲಿದೆ ಎಂದು ಅದು ಹೇಳಿದೆ.

Share This Article
Leave a Comment

Leave a Reply

Your email address will not be published. Required fields are marked *