ಬೆಂಗಳೂರು: ಬಿಟ್ ಕಾಯಿನ್ ದಂಧೆ ಪ್ರಕರಣದಲ್ಲಿ ಕಾಂಗ್ರೆಸ್ ಬಿಜೆಪಿ ಕೆಸರೆರಚಾಟ ಇನ್ನು ನಿಂತಂತೆ ಕಾಣುತ್ತಿಲ್ಲ. ಒಬ್ಬರ ಮೇಲೊಬ್ಬರ ಆರೋಪ ಪ್ರತ್ಯಾರೋಪ ಮಾಡುತ್ತಲೇ ಇದ್ದಾರೆ. ಇದೀಗ ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಬಿಟ್ ಕಾಯನ್ ದಂಧೆ ಹಿಡಿದವರೇ ನಾವೂ ಎಂದಿದ್ದಾರೆ.
ನೀವೂ ಅಧಿಕಾರದಲ್ಲಿದ್ದಾಗ ಬಿಟ್ ಕಾಯಿನ್ ಬೆಳೆಯಲು ಬಿಟ್ಟಿದ್ದು ಸರಿಯಲ್ಲ. ಇದನ್ನ ಹಿಡಿದವರೇ ನಾವೂ. ಬಹಳ ಮುಕ್ತವಾಗಿದ್ದೇವೆ. ಈ ಹಿಂದೆ ಶ್ರೀಕಿ ಬಿಟ್ಟುಕೊಟ್ಟವರ ಬಳಜ ನಾವೂ ಪಾಠ ಕಲಿಯಬೇಕಾಗಿಲ್ಲ. 2016ರಿಂದಲೂ ಪ್ರಕರಣ ಇದೆ ಅಂತಾರೆ. ಆಗ ಅವರ ಸರ್ಕಾರವೇ ಇತ್ತು. ಯಾಕೆ ಸುರ್ಜೇವಾಲ್ ಕ್ರಮ ಕೈಗೊಳ್ಳಲಿಲ್ಲ. ಆತನನ್ನ ಬಂಧಿಸಿದಾಗ ತನಿಖೆ ಮಾಡಬೇಕಿತ್ತು. ಯಾಕೆ ಬಿಟ್ಟು ಕಳುಹಿಸಿದ್ರು. ತನಿಖೆ ಮಾಡಿದ್ರೆ ಅಂದ್ರೆ ಪ್ರಕರಣ ಇತ್ಯರ್ಥ ಆಗ್ತಾ ಇತ್ತು.
ಹಗರಣದಲ್ಲಿ ಯಾರಿದ್ದಾರೆ ಮೊದಲು ಅವರ ಹೆಸರನ್ನು ಹೇಳಿ. ಇಲ್ಲಿ ಯಾರೇ ಇದ್ದರು ಬಿಡುವ ಪ್ರಶ್ನೆಯೇ ಇಲ್ಲ. ಇಬ್ಬರೂ ಪ್ರಭಾವಿ ವ್ಯಕ್ತಿಗಳಿದ್ದಾರೆ ಅಂತಾರೆ. ಅವರ ಹೆಸರನ್ನ ಹೇಳಲಿ. ಟ್ವೀಟ್ ಆಧಾರ ಮೇಲೆ ಆರೋಪ ಸರಿಯಲ್ಲ. ಅದರ ಮೇಲೆ ತನಿಖೆ ಮಾಡಲು ಆಗುತ್ತದೆಯಾ..? ಪ್ರಕರಣದ ತನಿಖೆ ಮಾಡ್ತಿರೋದು ನಾವೂ. ಇದರ ಹಿಂದೆ ಯಾರೇ ಇದ್ರು ಬಲಿ ಹಾಕ್ತೀವಿ ಎಂದಿದ್ದಾರೆ.