ಬೆಂಗಳೂರು: ಎಂಇಎಸ್ ಸಂಘಟನೆಯನ್ನ ಕರ್ನಾಟಕದಲ್ಲಿ ಬ್ಯಾನ್ ಮಾಡ್ಬೇಕು ಅಂತ ಒತ್ತಾಯಿಸಿರೋ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಆದ್ರೆ ಕರೆ ನೀಡಿದಾಗಿನಿಂದಲೂ ಸಾಕಷ್ಟು ಪರ ವಿರೋಧ ಕೇಳಿ ಬರುತ್ತಿದೆ. ಬಂದ್ ಮಾಡಿಯೇ ಮಾಡ್ತೀವಿ ಅಂತ ಸಂಘಟನೆಯವರು ಹೇಳಿದ್ರೆ ನಾವೂ ಬಂದ್ ಗೆ ಬೆಂಬಲಿಸಲ್ಲ ಅಂತ ಕೆಲವರು ಹೇಳ್ತಾ ಇದ್ದಾರೆ.
ಈ ಸಂಬಂಧ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಪ್ರತಿಷ್ಟೆಗೆ ಮಾಡ್ತಾ ಇರೋ ಬಂದ್ ಅಲ್ಲ. ಕನ್ನಡಕ್ಕಾಗಿ ಮಾಡ್ತಾ ಇರೋ ಬಂದ್. ನಾವೂ ಕರೆ ನೀಡಿರುವ ಬಂದ್ ಯಶಸ್ವಿ ಆಗಿಯೇ ಆಗುತ್ತೆ. ರಾಜ್ಯದ ಎಲ್ಲಾ ಕನ್ನಡಪರ ಸಂಘಟನೆ ಬಂದ್ ಗೆ ಬೆಂಬಲ ಸೂಚಿಸಿವೆ. 1800 ಸಂಘಟನೆಗಳು ಸಪೋರ್ಟ್ ಮಾಡಿವೆ.
ಕುಂದಾನಗರದಲ್ಲಿ ಸಾಕಷ್ಟು ಕನ್ನಡಪರ ಸಂಘಟನೆಗಳಿವೆ. ಅದರಲ್ಲಿ ಯಾವುದೋ ಒಂದು ಸಂಘಟನೆ ಬೆಂಬಲ ನೀಡಲ್ಲ ಎಂದರೆ ತಲೆಕೆಡಿಸಿಕೊಳ್ಳಲ್ಲ. ಅದನ್ನ ಗಂಭೀತವಾಗಿಯೂ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಬಂದ್ ಆಗಿಯೇ ಆಗುತ್ತೆ ಎಂದಿದ್ದಾರೆ.