ದೊಡ್ಮನೆ ಕುಡಿ ಯುವರಾಜ್ ಗೆ ನಾಯಕಿಯಾದ ‘ಕಾಂತಾರ’ ಲೀಲಾ..!

1 Min Read

ದೊಡ್ಮನೆ ಕುಡಿ.. ರಾಘವೇಂದ್ರ ರಾಜ್‍ಕುಮಾರ್ ಅವರ ಕಿರಿಯ ಪುತ್ರ ಸಿನಿಮಾ ಇಂಡಸ್ಟ್ರಿಗೆ ಅದ್ದೂರಿಯಾಗಿ ಬರುತ್ತಾ ಇದ್ದಾರೆ. ‘ಯುವ’ ಎಂಬ ಟೈಟಲ್ ಕೂಡ ಈಗಾಗಲೇ ಲಾಂಚ್ ಆಗಿದೆ. ‘ಯುವ’ ಅವರಿಗೆ ನಾಯಕಿ ಯಾರಾಗ್ತಾರೆ ಎಂಬ ಪ್ರಶ್ನೆ ಎಲ್ಲರನ್ನು ಕಾಡಿತ್ತು. ಯಾಕಂದ್ರೆ ಯುವ ರಾಜ್‍ಕುಮಾರ್ ಮೊದಲ ಸಿನಿಮಾ ಇದಾಗಿರುವ ಕಾರಣ, ನಾಯಕಿಯ ಮೇಲೂ ಅಷ್ಟೇ ಕುತೂಹಲವಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ.


ಹೊಂಬಾಳೆ ಫಿಲ್ಮ್ ಬ್ಯಾನರ್ ಅಧಿಕೃತವಾಗಿ ಯುವ ರಾಜ್‍ಕುಮಾರ್ ಅರಸಿಯನ್ನು ಪರಿಚಯಿಸಿದೆ. ಕಾಂತಾರ ಸಿನಿಮಾದಲ್ಲಿ ಮೋಡಿ ಮಾಡಿದ್ದ ಲೀಲಾ ಈಗ ಯುವ ಸಿನಿಮಾದಲ್ಲೂ ಮಿಂಚಲು ರೆಡಿಯಾಗಿದ್ದಾರೆ. ಸಪ್ತಮಿ ಗೌಡ ಯುವ ಸಿನಿಮಾದಲ್ಲಿ ನಾಯಕಿಯಾಗಿ‌ ನಟಿಸುತ್ತಿದ್ದಾರೆ.

ಸದ್ಯ ಟೈಟಲ್ ಟೀಸರ್ ಈಗಾಗಲೇ ಒಂದಷ್ಟು ಕುತೂಹಲವನ್ನು ಹುಟ್ಟು ಹಾಕಿದೆ. ನಿರೀಕ್ಷೆಯೂ ಜೋರಾಗಿದೆ. ಇದೇ ವರ್ಷದ ಕೊನೆಯಲ್ಲಿ ಯುವ ಸಿನಿಮಾ ತೆರೆಗೆ ಬರಲಿದೆ. ಯುವ ರಾಜ್‍ಕುಮಾರ್ ಕೂಡ ಹೊಂಬಾಳೆ ಹಾಕಿರುವ ಪೋಸ್ಟರ್ ಹಂಚಿಕೊಂಡು ಸಪ್ತಮಿ ಗೌಡಗೆ ಸ್ವಾಗತ ಕೋರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks