ಸುದ್ದಿಒನ್ ವೆಬ್ ಡೆಸ್ಕ್
ಹೊಂಬಾಳೆ ಸಂಸ್ಥೆ ನಿರ್ಮಿಸಿದ ‘ಕಾಂತಾರ’ ಚಿತ್ರ ಕನ್ನಡ ಸೇರಿದಂತೆ ದೇಶದ ಇತರೆ ಭಾಷೆಗಳಲ್ಲಿ ಬಿಡುಗಡೆಯಾದಾಗಿನಿಂದ ರಾಷ್ಟ್ರದಾದ್ಯಂತ ಅಭೂತಪೂರ್ವ ಯಶಸ್ಸು ಗಳಿಸಿದೆ. IMDb ಬಿಡುಗಡೆ ಮಾಡಿದ ಭಾರತದ ಪ್ರಸ್ತುತ ಟಾಪ್ 250 ಚಲನಚಿತ್ರಗಳ ಪಟ್ಟಿಯಲ್ಲಿ ಈ ಚಿತ್ರವು ಇತ್ತೀಚೆಗೆ ನಂ. 1 ಸ್ಥಾನವನ್ನು ಪಡೆದುಕೊಂಡಿದೆ.
ಈ ಚಿತ್ರವು ವಿಯೆಟ್ನಾಂನ ಹೋ ಚಿ ಮಿನ್ಹ್ ಸಿಟಿಯಲ್ಲಿ ಪ್ರದರ್ಶನಗೊಂಡ ಮೊಟ್ಟಮೊದಲ ಕನ್ನಡ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.
ವಿಯೆಟ್ನಾಂನಲ್ಲಿರುವ ಕನ್ನಡಿಗರ ಸಮುದಾಯವು ವಿಯೆಟ್ನಾಂನ ಹೋ ಚಿ ಮಿನ್ಹ್ ನಗರದ ಮೂಲ ಭಾರತೀಯರಿಗೆ ಮತ್ತು ಸ್ಥಳೀಯರಿಗಾಗಿ ನವೆಂಬರ್ 1ರಂದು ವಿಶೇಷ ದಿನವಾಗಿ ಪರಿಗಣಿಸಿ ‘ಕಾಂತಾರ’ ಚಲನಚಿತ್ರವನ್ನು ಪ್ರದರ್ಶಿಸಲಿದೆ.
ಇದಲ್ಲದೆ, ವಿಯೆಟ್ನಾಂನಲ್ಲಿರುವ ಇಂಡಿಯನ್ ಬ್ಯುಸಿನೆಸ್ ಚೇಂಬರ್ (Indian Business Chamber in Vietnam)(INCHAM)ನ ಗಣ್ಯರು ಸೇರಿದಂತೆ ರಾಯಭಾರಿ ಕಚೇರಿಯ ಗಣ್ಯರನ್ನು ಕರೆಯಿಸಿ, ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಸಲುವಾಗಿ ಚಲನಚಿತ್ರವನ್ನು ವೀಕ್ಷಿಸಲು ಆಹ್ವಾನಿಸಲಾಗುತ್ತದೆ. ಇದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ‘ಕಾಂತಾರ’ ಅಂತರಾಷ್ಟ್ರೀಯ ಮಟ್ಟದಲ್ಲಿ ಇತಿಹಾಸ ಸೃಷ್ಟಿಸಿದೆ.
#Kantara will be the first ever Kannada movie to be screened in Ho Chi Minh City, Vietnam.@shetty_rishab @VKiragandur @hombalefilms @gowda_sapthami @HombaleGroup @AJANEESHB #ArvindKashyap @actorkishore @KantaraFilm pic.twitter.com/HLEE7PX4DD
— Hombale Films (@hombalefilms) October 21, 2022