Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿಯೆಟ್ನಾಂನಲ್ಲಿ  ಪ್ರದರ್ಶನಗೊಂಡ  ಮೊಟ್ಟ ಮೊದಲ ಕನ್ನಡ ಚಲನಚಿತ್ರ ಕಾಂತಾರ

Facebook
Twitter
Telegram
WhatsApp

ಸುದ್ದಿಒನ್ ವೆಬ್ ಡೆಸ್ಕ್

ಹೊಂಬಾಳೆ ಸಂಸ್ಥೆ ನಿರ್ಮಿಸಿದ ‘ಕಾಂತಾರ’ ಚಿತ್ರ ಕನ್ನಡ ಸೇರಿದಂತೆ ದೇಶದ ಇತರೆ ಭಾಷೆಗಳಲ್ಲಿ ಬಿಡುಗಡೆಯಾದಾಗಿನಿಂದ   ರಾಷ್ಟ್ರದಾದ್ಯಂತ ಅಭೂತಪೂರ್ವ ಯಶಸ್ಸು ಗಳಿಸಿದೆ. IMDb ಬಿಡುಗಡೆ ಮಾಡಿದ ಭಾರತದ ಪ್ರಸ್ತುತ ಟಾಪ್ 250 ಚಲನಚಿತ್ರಗಳ ಪಟ್ಟಿಯಲ್ಲಿ ಈ ಚಿತ್ರವು ಇತ್ತೀಚೆಗೆ ನಂ. 1 ಸ್ಥಾನವನ್ನು ಪಡೆದುಕೊಂಡಿದೆ.

ಈ ಚಿತ್ರವು ವಿಯೆಟ್ನಾಂನ ಹೋ ಚಿ ಮಿನ್ಹ್ ಸಿಟಿಯಲ್ಲಿ ಪ್ರದರ್ಶನಗೊಂಡ ಮೊಟ್ಟಮೊದಲ ಕನ್ನಡ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

ವಿಯೆಟ್ನಾಂನಲ್ಲಿರುವ ಕನ್ನಡಿಗರ ಸಮುದಾಯವು ವಿಯೆಟ್ನಾಂನ ಹೋ ಚಿ ಮಿನ್ಹ್ ನಗರದ ಮೂಲ ಭಾರತೀಯರಿಗೆ ಮತ್ತು ಸ್ಥಳೀಯರಿಗಾಗಿ ನವೆಂಬರ್ 1ರಂದು ವಿಶೇಷ ದಿನವಾಗಿ ಪರಿಗಣಿಸಿ ‘ಕಾಂತಾರ’ ಚಲನಚಿತ್ರವನ್ನು ಪ್ರದರ್ಶಿಸಲಿದೆ.

ಇದಲ್ಲದೆ, ವಿಯೆಟ್ನಾಂನಲ್ಲಿರುವ  ಇಂಡಿಯನ್ ಬ್ಯುಸಿನೆಸ್ ಚೇಂಬರ್ (Indian Business Chamber in Vietnam)(INCHAM)ನ ಗಣ್ಯರು ಸೇರಿದಂತೆ ರಾಯಭಾರಿ ಕಚೇರಿಯ ಗಣ್ಯರನ್ನು ಕರೆಯಿಸಿ, ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಸಲುವಾಗಿ ಚಲನಚಿತ್ರವನ್ನು ವೀಕ್ಷಿಸಲು ಆಹ್ವಾನಿಸಲಾಗುತ್ತದೆ. ಇದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ‘ಕಾಂತಾರ’ ಅಂತರಾಷ್ಟ್ರೀಯ ಮಟ್ಟದಲ್ಲಿ ಇತಿಹಾಸ ಸೃಷ್ಟಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಎಳನೀರು ? ನಿಂಬೆ ರಸ ? ಸುಡುವ ಬಿಸಿಲಿನಲ್ಲಿ ಯಾವ ಪಾನೀಯ ಉತ್ತಮ….!

ಸುದ್ದಿಒನ್ : ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ ಅನೇಕರು ನಿರ್ಜಲೀಕರಣದ ಸಮಸ್ಯೆಯನ್ನು ಎದುರಿಸುತ್ತಾರೆ. ಈ ಸಮಯದಲ್ಲಿ ಕಾಲಕಾಲಕ್ಕೆ ಹೈಡ್ರೇಟಿಂಗ್(ನಿರ್ಜಲೀಕರಣ) ಪಾನೀಯವನ್ನು ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ. ಹೈಡ್ರೇಟಿಂಗ್ ಪಾನೀಯಗಳ ವಿಷಯಕ್ಕೆ ಬಂದರೆ, ಜನರ ಮನಸ್ಸಿಗೆ ಮೊದಲು

Aadhaar Card Updates : ಆಧಾರ್ ಕಾರ್ಡ್ ನಲ್ಲಿ ಈ ವಿವರಗಳನ್ನು ಎಂದಿಗೂ ಬದಲಾಯಿಸಲಾಗುವುದಿಲ್ಲ..

ಸುದ್ದಿಒನ್ : ಇಂದಿನ ಡಿಜಿಟಲ್ ಯುಗದಲ್ಲಿ, ನೀವು ಬ್ಯಾಂಕ್ ಖಾತೆ ತೆರೆಯಲು, ಗ್ಯಾಸ್ ಸಂಪರ್ಕವನ್ನು ಪಡೆಯಲು ಅಥವಾ ಹೊಸ ಸಿಮ್ ಕಾರ್ಡ್ ಖರೀದಿಸಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಈ ಕಾರ್ಡ್ ಪ್ರಸ್ತುತ ಭಾರತೀಯ ಪೌರತ್ವಕ್ಕೆ

ಈ ರಾಶಿಗಳ ಗೃಹ ಕಟ್ಟಡ ಉದ್ಯಮದಾರಿಗೆ ಆರ್ಥಿಕ ಚೇತರಿಕೆ

ಈ ರಾಶಿಗಳ ಗೃಹ ಕಟ್ಟಡ ಉದ್ಯಮದಾರಿಗೆ ಆರ್ಥಿಕ ಚೇತರಿಕೆ, ಶುಕ್ರವಾರ ರಾಶಿ ಭವಿಷ್ಯ -ಏಪ್ರಿಲ್-19,2024 ಸೂರ್ಯೋದಯ: 06:00, ಸೂರ್ಯಾಸ್ತ : 06:29 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,ಚೈತ್ರಮಾಸ,ಶುಕ್ಲ ಪಕ್ಷ,

error: Content is protected !!