ಬೆಳಗಾವಿ: ಮರಾಠಿಗರು ಕನ್ನಡಿಗರ ವಿರುದ್ಧ ಪದೇ ಪದೇ ಹಗೆ ಸಾಧಿಸುತ್ತಿದ್ದಾರೆ. ಮೊದಲ ಬಾರಿಗೆ ಕನ್ನಡ ಬಾವುಟವನ್ನ ಸುಟ್ಟು ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದ ಎಂಇಎಸ್ ಪುಂಡರು, ಇತ್ತೀಚೆಗೆ ಮತ್ತೆ ಬಾವುಟ ಸುಟ್ಟಿದ್ದಾರೆ.ಇದು ಕನ್ನಡಿಗರ ಮತ್ತಷ್ಟು ಕೋಪಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಚಿವ ಅಶ್ವಥ್ ನಾರಾಯಣ್ ಮಾತನಾಡಿದ್ದು, ಎಲ್ಲರೂ ಒಂದೇ, ಶಾಂತಿ ಕಾಪಾಡಬೇಕು ಎಂದಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಗಲಭೆ ಎಬ್ಬಿಸುವುದು, ಭಾವನೆ ಕೆರಳಿಸುವುದು ಮಾಡುವುದು ಬೇಡ. ಯಾರು ಕೂಡ ಕಾನೂನನ್ನ ಕೈಗೆತ್ತಿಕೊಳ್ಳುವುದು ಬೇಡ. ಕನ್ನಡಿಗರು, ಮರಾಠಿಗರು ಎಲ್ಲರೂ ನಮ್ಮವರೆ ಎಂದಿದ್ದಾರೆ.
ಕನ್ನಡಪರ ಸಂಘಟನೆಗಳ ತಮ್ಮ ಭಾವನೆ ವ್ಯಕ್ತಪಡಿಸಲು ಬಂದ್ ಗೆ ಕರೆ ನೀಡಿವೆ. ಆದ್ರೆ ಈಗ ಬಂದ್ ಮಾಡುವ ಅವಶ್ಯಕತೆ ಇಲ್ಲ. ಸರ್ಕಾರ ನಾಡು, ನುಡಿಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೆ ಇಲ್ಲ. ಯಾರೇ ತಪ್ಪು ಮಾಡಿದ್ರು ಶಿಕ್ಷಿಸದೆ ಬಿಡೋದಿಲ್ಲ. ಕನ್ನಡಿಗರ ಭಾವನಕ್ಕೆ ಧಕ್ಕೆ ತರುವುದಕ್ಕೂ ನಡೆದುಕೊಳ್ಳಲ್ಲ ಎಂದಿದ್ದಾರೆ.