ದರ್ಶನ್ ವಿರುದ್ಧ ದೂರು ವಾಪಸ್ ಪಡೆದು, ಕ್ಷಮೆ ಕೇಳಿದ್ದೇಕೆ ಕನ್ನಡದ ಶಫಿ..?

1 Min Read

ನಟ ದರ್ಶನ್ ಇತ್ತಿಚೆಗೆ ಎರಡು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇವತ್ತು ಇವಳಿರುತ್ತಾಳೆ.. ನಾಳೆ ಅವಳಿರ್ತಾಳೆ ಎಂಬ ಹೇಳಿಕೆಗಳನ್ನು ನೀಡಿ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಹೆಣ್ಣು ಮಕ್ಕಳ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ. ಇದು ಮಹಿಳಾ ಕುಲಕ್ಕೆ ಮಾಡಿದ ಅವಮಾನವೆಂದು ಮಹಿಳೆಯರು ರೊಚ್ಚುಗೆದ್ದು ದೂರು ನಿಡೀದ್ದಾರೆ. ಇನ್ನು ಕಾಟೇರ ಸಕ್ಸಸ್ ದಿನ ನಿರ್ಮಾಪಕ ಉಮಾಪತಿ ಅವರ ಬಗ್ಗೆ ಮಾತನಾಡಿದ ದರ್ಶನ್, ತಗಡೇ ಎಂಬ ಪದ ಬಳಕೆ ಮಾಡಿದ್ದರು. ಈ ವಿಚಾರಕ್ಕೆ ಕನ್ನಡ ಶಫಿ ಅವರು ದೂರು ನೀಡಿದ್ದರು.

 

ನಿರ್ಮಾಪಕ ಉಮಾಪತಿ ಅವರನ್ನು ದರ್ಶನ್ ನಿಂದಿಸಿದ್ದಾರೆ ಎಂದು ಆರೋಪಿಸಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಇದೀಗ ಆ ದೂರನ್ನು ಹಿಂಪಡೆದಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಕ್ಷಮೆಯನ್ನು ಯಾಚಿಸಿದ್ದಾರೆ. ದರ್ಶನ್ ಅಭಿಮಾನಿಗಳ ಕ್ಷಮೆ ಕೇಳಿದ ಕನ್ನಡ ಶಫಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಫಿ ಮಾಡಿರುವ ವಿಡಿಯೋದಲ್ಲಿ ಏನಿದೆ..?: ಎಲ್ಲರಿಗೂ ನಮಸ್ಕಾರ. ನಾನು ಕನ್ನಡ ಶಫಿ. ಇವತ್ತು ನಾನು ನಿಮ್ಮ ಮುಂದೆ ಬಂದಿರುವ ಉದ್ದೇಶ ಏನು ಅಂದ್ರೆ, ದರ್ಶನ್ ಅವರು ವೇದಿಕೆ ಮೇಲೆ ಬಳಸಿದ್ದ ಪದಗಳು ಮುಜುಗರ ಉಂಟು ಮಾಡಿತ್ತು. ಹಾಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದೆವು‌. ದರ್ಶನ್ ಹಿರಿಯ ನಟ. ನಾವೂ ದೂರು ನೀಡಬಾರದಿತ್ತು. ಯಾಕೋ ಸ್ವಲ್ಪ ಆತುರ ಪಟ್ಟೆವು ಎನಿಸಿತು. ಹೀಗಾಗಿ ನನ್ನಿಂದ ದರ್ಶನ್ ಅವರಿಗಾಗಲಿ, ಕನ್ನಡಿಗರಿಗಾಗಲೀ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ವಿಡಿಯೋ ಮೂಲಕ ಮಾಹಿತಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *