Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕನ್ನಡ ಸಾಹಿತ್ಯ ಪರಿಷತ್ತು ಜನತಾ ವಿಶ್ವವಿದ್ಯಾಲಯದಂತೆ ಕಾರ್ಯನಿರ್ವಹಿಸುತ್ತಿದೆ : ಬಿ.ರಾಜಶೇಖರಪ್ಪ

Facebook
Twitter
Telegram
WhatsApp

ಚಿತ್ರದುರ್ಗ, (ಮೇ.05) : ಕನ್ನಡ ಸಾಹಿತ್ಯ ಪರಿಷತ್ತು ಜನತಾ ವಿಶ್ವವಿದ್ಯಾಲಯದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಖ್ಯಾತ ಇತಿಹಾಸ  ಸಂಶೋಧಕ ಬಿ.ರಾಜಶೇಖರಪ್ಪ ಹೇಳಿದ್ದಾರೆ.

ಅವರು ಗುರುವಾರ ನಗರದ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 109 ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಂಗಳೂರಿನಿಂದ ರಾಜ್ಯದಲ್ಲಿನ ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕನ್ನಡದ ಪರಿಸರವನ್ನು ಸಂಸ್ಥೆ ಬೆಳೆಸುತ್ತಿದೆ. ಸ್ಥಳೀಯ ಸಾಹಿತಿಗಳು, ಲೇಖಕರಿಗೆ ಅವಕಾಶಗಳನ್ನು ಸಂಸ್ಥೆ ನೀಡಿದೆ.  ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಸೇರಿದಂತೆ ನಾನಾ ಪ್ರಮುಖರಿಂದ ಕನ್ನಡ ಸಾಹಿತ್ಯ ಪರಿಷತ್ತು 1915 ರಲ್ಲಿ ಆರಂಭವಾಯಿತು. ಬಿ.ಎಂ.ಶ್ರೀಕಂಠಯ್ಯ, ಡಿ.ವಿ.ಗುಂಡಪ್ಪ, ಶಿವಮೂರ್ತಿ ಶಾಸ್ತ್ರಿಗಳು,ಎಂ.ಆರ್.ಶ್ರೀನಿವಾಸ ಮೂರ್ತಿ ಸೇರಿದಂತೆ ಪ್ರಮುಖ ಸಾಹಿತ್ಯ ಸೇವಕರು ಪರಿಷತ್ತನ್ನು ಕಟ್ಟಿ ಬೆಳೆಸಿದ್ದಾರೆ.

ಬಿ.ಎಂ.ಶ್ರೀಕಂಠಯ್ಯ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರೂ ಕನ್ನಡ ಭಾಷೆ, ಸಂಗೀತ, ಕಲೆಗಳಿಗೆ ಪರಿಷತ್ತು ಅವಕಾಶ ನೀಡಬೇಕು ಎಂಬ ಕಳಕಳಿಯನ್ನು ಹೊಂದಿದ್ದು. ಇತರೆ ಭಾಷೆಗಳ ಜನರು ಇಂಥಹ ಸಂಸ್ಥೆ ನಮ್ಮ ಭಾಷೆಯಲ್ಲಿಯೂ ಇರಬೇಕು ಎನ್ನುವಷ್ಟರ ಮಟ್ಟಿಗೆ ಸಂಸ್ಥೆ ಬೆಳೆದಿದೆ. ಸಾಹಿತ್ಯ ಪರಿಷತ್ತು ಮುದ್ರಿಸಿ, ಪ್ರಕಟಿಸಿರುವ ನಿಘಂಟು ಅತ್ಯಂತ ಶ್ರೇಷ್ಠ ಕೊಡುಗೆಯಾಗಿದೆ.  ಎಂದರು.

ಇತ್ತೀಚಿನ ದಿನಗಳಲ್ಲಿ ಇಂಗ್ಲೀಷ್ ಭಾಷೆಯ ಬಗ್ಗೆ ಪೋಷಕರ ವ್ಯಾಮೋಹ ಹೆಚ್ಚಾಗಿದೆ. ಆದ್ದರಿಂದ ಕನ್ನಡ ಕಲಿಕೆಗೆ ತೊಂದರೆಯಾಗಿದೆ. ಕನ್ನಡ ಶಾಲೆಗಳು ಉಳಿಯುವಿಕೆ ಅಗತ್ಯವಾಗಿದೆ. ಸರಕಾರಿ ಶಾಲೆಗಳಲ್ಲಿ ಸೌಲಭ್ಯಗಳನ್ನು ಉನ್ನತೀರಿಸುವ ಅವಶ್ಯಕತೆಯಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಪ್ಪಿಲ್ಲದಂತೆ ಓದುವ, ಬರೆಯುವ ಮತ್ತು ಉಚ್ಚಾರಣೆ ಮಾಡುವುದನ್ನು ಕಲಿಯುವುದು ಇಂದಿನ ಅಗತ್ಯವಾಗಿದೆ. ಅನ್ಯ ಭಾಷಿಕರಿಗೆ ಕನ್ನಡದ ಅಭಿಮಾನ ಹೆಚ್ಚಾಗಿದೆ. ಆದರೆ ಕನ್ನಡಿಗರಾದ ನಾವು ಭಾಷೆಯನ್ನು ಪ್ರೀತಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ ಮಾತನಾಡಿ, ಭಾಷೆಯನ್ನು ಹೆಚ್ಚು ಬಳಸಿದಂತೆ ಭಾಷೆಯ ಬೆಳವಣಿಗೆಯಾಗುತ್ತದೆ. ಸಾಹಿತ್ಯ ಪರಿಷತ್ತು ದೇಶದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಕನ್ನಡಿಗರಾದ ನಾವು ಮಾತು ಮತ್ತು ಬರವಣೆಗೆಯಲ್ಲಿ ಕನ್ನಡದ ಪದಗಳನ್ನು ಹೆಚ್ಚಾಗಿ ಬಳಸುವುದನ್ನು ರೂಢಿಸಿಕೊಳ್ಳುವುದು ಅಗತ್ಯ. ಕನ್ನಡ,ಕನ್ನಡಿಗ ಮತ್ತು ಕರ್ನಾಟಕದ ಸಾಹಿತ್ಯದ ಬೆಳವಣಿಗೆಗೆ ಕಸಾಪ ಶ್ರಮಿಸುತ್ತಿದೆ ಎಂದರು.

ಜಿಲ್ಲಾ ಕಸಾಪದ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಮಾತನಾಡಿ, ಭಾಷೆಯು ನಮ್ಮ ನಾಡಿನ ಸಂಸ್ಕøತಿಯನ್ನು ಮುನ್ನಡೆಸುವ ಪ್ರಬಲ ಸಾಧನವಾಗಿದೆ. ಭಾಷೆಯ ಉಳಿವಿಗೆ ಶಿಕ್ಷಕರ ಕೊಡುಗೆ ಹೆಚ್ಚಿನ ಪ್ರಮಾಣದಲ್ಲಿದೆ. ಕಸಾಪ ಮಾಜಿ ಅಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿದರು.
ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎ.ಜೆ.ಬಸವರಾಜಪ್ಪ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.

ಕೆ.ಪಿ.ಎಂ.ಗಣೇಶಯ್ಯ, ಕೋಶಾಧ್ಯಕ್ಷ ಸಿ.ಲೋಕೇಶ್, ಸಂಚಾಲಕ ಶ್ರೀನಿವಾಸ ಮಳಲಿ, ಗಡಾರಿ ಕೃಷ್ಣಪ್ಪ, ಮಲ್ಲಿಕಾರ್ಜುನ, ಮುಖ್ಯಶಿಕ್ಷಕ ಸಿ.ರಂಗನಾಯ್ಕ, ಡಾ. ಯಶೋಧ ರಾಜಶೇಖರಪ್ಪ ಪ್ರಶಿಕ್ಷಣಾರ್ಥಿಗಳಾದ ಲಕ್ಷ್ಮಿ.ಎಂ, ಸೌಮ್ಯ ಟಿ.ಜಿ, ಅರ್ಪಿತ, ನಿರ್ಮಲ, ಕೃಷ್ಣ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಕೆಪಿಎಂ ಗಣೇಶಯ್ಯ ಕನ್ನಡಗೀತ ಗಾಯನ ನೆರವೇರಿಸಿದರು. ಉಪನ್ಯಾಸಕ ಪಾತಲಿಂಗಪ್ಪ ಸ್ವಾಗತಿಸಿದರು, ಏಳಂಜಿ ಕಾಡಪ್ಪ ನಿರೂಪಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿ ಎನ್ ಚಂದ್ರಪ್ಪ ಪರ ಮತಯಾಚನೆ ಮಾಡಿ, ಮೋದಿ, ಅಮಿತ್ ಶಾ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಚಿತ್ರದುರ್ಗ: ಈ ತಿಂಗಳ 26 ಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ರನ್ನ ಹೆಚ್ಚು ಮತಗಳಿಂದ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡ್ತೀನಿ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಮೋದಿಯವರು ಪ್ರಧಾನಿಯಾಗಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸುತ್ತೇವೆ: ಪ್ರಿಯಾಂಕಾಗಾಂಧಿ ಭರವಸೆ

ಚಿತ್ರದುರ್ಗ ಏ 23: ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸಲು ಮೇಲದ ಮೇಲೆ ನಾವು ಕೇಂದ್ರಕ್ಕೆ ಕೇಳುತ್ತಲೇ ಇದ್ದೇವೆ. ಆದರೂ ಇದುವರೆಗೂ ಏಕೆ ಸ್ಪಂದಿಸುತ್ತಿಲ್ಲ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು. ಇಲ್ಲಿ

ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ: ಸಿ.ಎಂ. ಸಿದ್ದರಾಮಯ್ಯ

ಚಿತ್ರದುರ್ಗ ಏ 23: ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ

error: Content is protected !!