ಕರವೇ ನಾರಾಯಣ ಗೌಡರ ಬಂಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಖಂಡನೆ…!

suddionenews
1 Min Read

ಬೆಂಗಳೂರು: ಕನ್ನಡ ನಾಮಫಲಕಗಳನ್ನು ಅಳವಡಿಕೆ ಮಾಡಬೇಕೆಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ವೇಳೆ ಕರವೇ ನಾರಾಯಣ ಗೌಡ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ನಾರಾಯಣ ಗೌಡ ಅವರನ್ನು ಬಂಧಿಸಿದ್ದಕ್ಕೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಕನ್ನಡ ಸಾಹಿತ್ಯ ಪರಿಷತ್ ಕೂಡ ಅವರ ಬಂಧನವನ್ನು ಖಂಡಿಸಿದೆ.

ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಮಹೇಶ್ ಜೋಶಿ ಈ ಕುರಿತು ಹೇಳಿಕೆ ಪ್ರಕಟಿಸಿದ್ದು, ವಿನಾಕಾರಣ ಬಂಧಿಸಿರುವುದನ್ನು ಖಂಡಿಸುತ್ತೇವೆ.ಈ ಪ್ರತಿಭಟನೆ ಮಾಡಿದ್ದು ರಾಜ್ಯ ಸರ್ಕಾರದ ನಿಯಮ ಜಾರಿ ಮಾಡಲಿ ಎಂದೇ. ಮಾಲ್, ಅಂಗಡಿ ಸೇರಿದಂತೆ ಎಲ್ಲೆಡೆ ಶೇಕಡ 60 ರಷ್ಟು ಕನ್ನಡ ಭಾಷೆ ಇರಲಿ ಎಂದು ರಾಜ್ಯ ಸರ್ಕಾರ ನಿಯಮ ಮಾಡಿದೆ. ಅದರ ಜಾರಿಗೆ ಎಲ್ಲರೂ ಹೋರಾಟ ಮಾಡಿದ್ದಾರೆ. ಈ ಪ್ರತಿಭಟನೆಯ ಕುರಿತು ಟಿ ಎ ನಾರಾಯಣಗೌಡ ಸಾಕಷ್ಟು ಮುಂಚೆಯೇ ಸಾಮಾಜಿಕ ಜಾಲತಾಣ ಕರಪತ್ರ, ಜಾಹೀರಾತುಗಳ ಮೂಲಕ ಪ್ರಕಟಣೆ ನೀಡಿದ್ದರು.

ರಾಜ್ಯ ಸರ್ಕಾರವು ಮತ್ತು ಪೊಲೀಸರು ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನಕಾರರ ವಿಷಯದಲ್ಲಿ ಸಂವೇದನಾಶೀಲವಾಗಿ ವರ್ತಿಸಬಹುದಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಇಲ್ಲವೆ ಕರ್ನಾಟಕ ರಾಜ್ಯ ವಾಣಿಜ್ಯ ಮಹಾಮಂಡಳಿಯ ನೇತೃತ್ವದಲ್ಲಿ ದುಂಡು ಮೇಜಿನ ಸಭೆಯನ್ನು ಮೊದಲೇ ನಡೆಸಿದ್ದರೆ ಕ.ರ.ವೇ ಪ್ರತಿಭಟನೆಯು ನಡೆಯುತ್ತಲೇ ಇರಲಿಲ್ಲ. ಕನ್ನಡಿಗರ ಆಕ್ರೋಶದ ಕಟ್ಟೆ ಒಡೆಯುವ ಮುನ್ನ, ಬಂಧಿಸಿರುವ ಟಿ ಎ ನಾರಾಯಣ ಗೌಡ ಹಾಗೂ ಕನ್ನಡಪರ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಮಹೇಶ್ ಜೋಶಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *