ಬೆಳಗಾವಿ: ಇಂದು 67ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ. ಎಲ್ಲೆಲ್ಲೂ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರು ಸಂಭ್ರಮ ಪಡುತ್ತಿದ್ದಾರೆ. ಇದರ ನಡುವೆ ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ರಾಜ್ಯೋತ್ಸವದ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯಲ್ಲಿ ಪಾಲ್ಗೊಳ್ಳುವ 50 ಸಾವಿರ ಮಂದಿಗೆ ಹೋಳಿಗೆ ಊಟದ ವ್ಯವಸ್ಥೆ ಇರಲಿದೆ.
ಹೋಳಿಗೆ ಅಡುಗೆಯನ್ನು 200 ಜನ ಬಾಣಸಿಗರು ಸೇರಿ ಸಿದ್ಧತೆ ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವಕ್ಕಾಗಿ ಎರಡು ದಿನದಿಂದ ಅಡುಗೆ ತಯಾರಿ ನಡೆಸಿದ್ದಾರೆ. ಹೋಳಿಗೆ, ಅನ್ನ, ಸಾಂಬಾರ್, ಬದ್ನಿ ಪಲ್ಯದ ಊಟ ತಯಾರಾಗಿದೆ.
ಕನ್ನಡ ರಾಜ್ಯೋತ್ಸವದ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹಾಗೂ ನಟ ಸಾಯಿಕುಮಾರ್ ಚಾಲನೆ ನೀಡಲಿದ್ದಾರೆ. ರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗಿಯಾಗುವಂತ ಪ್ರತಿಯೊಬ್ಬರಿಗೂ ಎರಡು ಹೋಳಿಗೆ, ಅನ್ನ ಸಾಂಬಾರ್, ಬದ್ನಿ ಚಟ್ನಿಯನ್ನು ನೀಡಲಾಗುತ್ತದೆ.